ಕ್ರೀಡೆ

ಎ ಎಫ್ ಸಿ ಏಷ್ಯಾ ಕಪ್ ಫುಟ್ಬಾಲ್ ಅರ್ಹತಾ ಪಂದ್ಯ: ಮಯನ್ಮಾರ್ ವಿರುದ್ಧ 2-2 ಅಂತರದ ಡ್ರಾ ಸಾಧಿಸಿದ ಭಾರತ

Raghavendra Adiga
ಮಾರ್ಗೋವಾ: ಗೋವಾದ ಪಂಡಿತ್ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಎ ಎಫ್ ಸಿ ಏಷ್ಯಾ ಕಪ್ ಫುಟ್ಬಾಲ್   2019 ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಭಾರತ ಪುರುಷರ ತಂಡ ಮಯನ್ಮಾರ್ ವಿರುದ್ಧ 2-2 ಅಂತರದ ಡ್ರಾ ಸಾಧಿಸಿದೆ.
ಸುನಿಲ್ ಚೆಟ್ರಿ (13) ಮತ್ತು ಜೆಜೆ ಲಾಲ್ಪೆಕ್ಲುವಾ (69) ಇಬ್ಬರು ಹೊಡೆದ ಗೋಲುಗಳಿಂದ ಭಾರತ ಡ್ರಾ ಸಾಧಿಸಲು ಸಾಧ್ಯವಾಗಿದೆ. ಈ ಪಂದ್ಯ ಡ್ರಾ ಆದ ಕಾರಣ ಭಾರತ ತಂಡ ಎ ಎಫ್ ಸಿ ಏಷ್ಯಾ ಕಪ್ 2019 ನ  'ಎ; ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದೆ. ಭಾರತ ಆಡಿರುವ ಐದು ಪಂದ್ಯಗಳಿಂದ ಒಟ್ಟು 13 ಅಂಕಗಳನ್ನು ಗಳಿಸಿದೆ.
ಇನ್ನು ನಾಲ್ಕು ಪಂದ್ಯಗಳಿಂದ 7 ಅಂಕ ಅಗ್ಳಿಸಿದ ಕಜಕಿಸ್ಥಾನ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮಯನ್ಮಾರ್ ಮೂರನೇ ಸ್ಥಾನ ಹಾಗೂ ಇನ್ನೂ ಒಂದೂ ಪಂದ್ಯ ಗೆಲ್ಲದ ಮಕಾವು ಕಡೆಯ ಸ್ಥಾನದಲ್ಲಿದೆ.
ಇದೇ ವೇಳೆ ಕಳೆದ 12 ಪಂದಯಗಳನ್ನು ಗೆದ್ದು ಅಜೇಯವಾಗಿದ್ದ ಭಾರತ ತಂಡಕ್ಕೆ 13ನೇ ಗೆಲುವು ದಕ್ಕಿಸಿಕೊಳ್ಳಲು ಮಯನ್ಮಾರ್ ಅವಕಾಶ ನೀಡಲಿಲ್ಲ. 
SCROLL FOR NEXT