ಕ್ರೀಡೆ

ಹಾಂಗ್ ಕಾಂಗ್ ಓಪನ್: ಕ್ವಾರ್ಟರ್ ಫೈನಲ್ ಸುತ್ತು ಪ್ರವೇಶಿಸಿದ ಸಿಂಧು

Raghavendra Adiga
ಕೌಲೂನ್: ರಿಯೋ ಒಲಂಪಿಕ್ಸ್ ನ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಇದೀಗ ನಡೆಯುತ್ತಿರುವ ಹಾಂಗ್ ಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸಿಂಧು ಜಪಾನ್‌ನ ಅಯ ಓಹೊರಿ ವಿರುದ್ಧ 21-14, 21-17 ಅಂತರದಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ಸ್ ತಲುಪಿದ್ದಾರೆ. ಎರಡನೇ ಶ್ರೇಯಾಂಕರ ಬಾರತೀಯ ಆಟಗಾರ್ತಿ ಸಿಂಧು ತಮ್ಮ ಮುಂದಿನ ಸುತ್ತಿನಲ್ಲಿ ಚೀನಾ ಓಪನ್ ಚಾಂಪಿಯನ್ ಆಗಿರುವ ಅಕೇನ್ ಯಮಗುಚಿ ಅವರನ್ನು ಎದುರಿಸಲಿದ್ದಾರೆ.
ಇನ್ನು ಇಂದು ನಡೆಯುವ ಇನ್ನೆರಡು ಮಹತ್ವದ ಪಂದ್ಯಗಳಲ್ಲಿ  ಭಾರತದ ಇನ್ನೋರ್ವ ಬ್ಯಾಡ್ಮಿಂತನ್ ತಾರೆ ಸೈನಾ ನೆಹ್ವಾಲ್, ಚೀನಾದ ಚೆನ್ ಯೂಫೀ  ವಿರುದ್ಧ ಸೆಣಸಲಿದ್ದು ಪುರುಷರ ವಿಭಾಗದಲ್ಲಿ ಎಸ್.ಎಸ್. ಪ್ರಣೋಯ್ ಅವರು ಜಪಾನ್ ನ  ಕುಜುಮಾಸ್ ಕಕೈಅವರ ಸವಾಲಿಗೆ ಉತ್ತರಿಸಲಿದ್ದಾರೆ.
SCROLL FOR NEXT