ಒರ್ಲಾಂಡೋ(ಫ್ಲೋರಿಡಾ): ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ದಾಖಲೆ ಬರೆದಿರುವ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಇದೀಗ ಬಾಸ್ಕೆಟ್ ಬಾಲ್ ಅಂಗಳದಲ್ಲೂ ಭಾರೀ ಸದ್ದು ಮಾಡಿದೆ.
ಫ್ಲೋರಿಡಾದ ಒರ್ಲಾಂಡೊವಿನಲ್ಲಿ ಎನ್ ಬಿಎ ಆಯೋಜಿಸಿದ್ದ ಬಾಸ್ಕೆಟ್ ಬಾಲ್ ಪಂದ್ಯದ ವೇಳೆ ಕೆಲ ಮಕ್ಕಳು ಬಾಹುಬಲಿ 2 ಚಿತ್ರದ ಶೀರ್ಷಿಕೆ ಗೀತೆಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.
ಹಳದಿ ವರ್ಣದ ವಸ್ತ್ರ ತೊಟ್ಟಿದ್ದ ಚಿಣ್ಣರು ಬಾಹುಬಲಿ 2 ಚಿತ್ರದ ಸಾಹೋರೆ ಬಾಹುಬಲಿ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.