ಟ್ರ್ಯಾಕ್ ಏಷ್ಯಾಕಪ್: ಪದಕ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ
ಟ್ರ್ಯಾಕ್ ಏಷ್ಯಾಕಪ್ ನ ಪದಕ ಪಟ್ಟಿಯಲ್ಲಿ ಭಾರತ ಸೈಕ್ಲಿಂಗ್ ತಂಡ ಅಗ್ರಸ್ಥಾನ ಪಡೆದು ಟೂರ್ನಿಯನ್ನು ಕೊನೆಗೊಳಿಸಿದೆ...
ನವದೆಹಲಿ: ಟ್ರ್ಯಾಕ್ ಏಷ್ಯಾಕಪ್ ನ ಪದಕ ಪಟ್ಟಿಯಲ್ಲಿ ಭಾರತ ಸೈಕ್ಲಿಂಗ್ ತಂಡ ಅಗ್ರಸ್ಥಾನ ಪಡೆದು ಟೂರ್ನಿಯನ್ನು ಕೊನೆಗೊಳಿಸಿದೆ.
ಐಜಿಐ ಕ್ರೀಡಾ ಸಂಕೀರ್ಣದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಏಳು ಸ್ವರ್ಣ, 9 ಬೆಳ್ಳಿ ಹಾಗೂ 5 ಕಂಚಿನ ಪದಕ ಗೆಲ್ಲುವ ಮೂಲಕ ಅಗ್ರಸ್ಥಾನಕ್ಕೇರಿದೆ. ಇನ್ನು 4 ಚಿನ್ನ, 2 ಬೆಳ್ಳಿ ಪದಕ ಗಳಿಸುವ ಮೂಲಕ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಟೂರ್ನಿಯ ಮೊದಲ ದಿನ ಭಾರತ 3 ಚಿನ್ನ, 7 ಬೆಳ್ಳಿ ಮತ್ತು 3 ಕಂಚಿನ ಪದಕ ಗೆದ್ದಿತ್ತು. ಜೂನಿಯರ್ ವಿಭಾಗದಲ್ಲಿ ಮಯೂರ್ ಪವಾರ್ ಮತ್ತು ಜೆಕೆ ಅಶ್ವಿನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರೆ, ಮಹಿಳಾ ಎಲೈಟ್ ಸ್ಪಿಂಟ್ ನಲ್ಲಿ ಪಿ ನಯನಾ ರಾಜೇಶ್ ಕಂಚಿನ ಪದಕಕ್ಕೆ ಭಾಜನರಾದರು.