ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯಾ ಕಪ್ ಹಾಕಿ: ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಏಷ್ಯಾಕಪ್ ಹಾಕಿ ಟೂರ್ನಿಯ 2ನೇ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ತಂಡದ ವಿರುದ್ಧ ಭಾರತ ಭರ್ಜರಿ ಜಯ ಗಳಿಸಿದೆ...

ಭಾರತ
Vishwanath S
Updated On : 14 Oct 2017, 1:02 am
ಢಾಕಾ: ಏಷ್ಯಾಕಪ್ ಹಾಕಿ ಟೂರ್ನಿಯ 2ನೇ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ತಂಡದ ವಿರುದ್ಧ ಭಾರತ ಭರ್ಜರಿ ಜಯ ಗಳಿಸಿದೆ. 
ನ್ಯಾಷನಲ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಲಾಢ್ಯ ತಂಡವಾಗಿರುವ ಭಾರತ ಬಾಂಗ್ಲಾದೇಶದ ವಿರುದ್ಧ 7-0 ಗೋಲುಗಳಿಂದ ಗೆಲುವು ಸಾಧಿಸಿ ಏಷ್ಯಾಕಪ್ ಹಾಕಿಯಲ್ಲಿ 2ನೇ ಸುತ್ತಿಗೆ ಲಗ್ಗೆ ಇಟ್ಟಿದೆ. 
ಮೊದಲ ಪಂದ್ಯದಲ್ಲಿ ಭಾರತ ಜಪಾನ್ ವಿರುದ್ಧ 5-1 ಗೋಲುಗಳಿಂದ ಮಣಿಸಿತ್ತು. ಇನ್ನು ಸತತ ಎರಡು ಪಂದ್ಯಗಳ ಗೆಲವಿನೊಂದಿಗೆ 6 ಅಂಕಗಳನ್ನು ಸಂಪಾದಿಸಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದೆ. 

Advertisement

Advertisement

ಲೀಗ್ ನಲ್ಲಿ 2 ಗೆಲುವು ಸಾಧಿಸಿರುವ ಭಾರತ ತಂಡ ಅಂತಿಮ ಪಂದ್ಯದಲ್ಲಿ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement