ಶಾಂಘೈ: ಜಗತ್ತಿನ ದಿಗ್ಗಜ ಟೆನಿಸ್ ಆಟಗಾರರಾದ ಶಾಂಘೈ ಮಾಸ್ಟರ್ಸ್ ಗಾಗಿ ನಡೆದ ಫೈನಲ್ ಪಂದ್ಯದಲ್ಲಿ ರಫೇಲ್ ನಡಾಲ್ ರನ್ನು ಮಣಿಸಿ ರೋಜರ್ ಫೆಡರರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ರಫೇಲ್ ನಡಾಲ್ ವಿರುದ್ಧ 6-4, 6-3 ನೇರ ಸೆಟ್ ಗಳಿಂದ ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟರು.
ಸ್ವಿಜರ್ಲೆಂಡ್ ನ ಆಟಗಾರ 36 ವರ್ಷದ ರೋಜರ್ ಫೆಡರರ್ ಒಟ್ಟಾರೆ 94 ಟೈಟಲ್ ಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.