ಭಾರತೀಯ ಫುಟ್‌ಬಾಲ್‌ ತಂಡ 
ಕ್ರೀಡೆ

ಫಿಫಾ ರ್ಯಾಂಕಿಂಗ್: ಎರಡು ಸ್ಥಾನಕ್ಕೆ ಮೇಲಕ್ಕೇರಿದ ಭಾರತ

ಭಾರತೀಯ ಫುಟ್‌ಬಾಲ್‌ ತಂಡ ಅಂತರರಾಷ್ಟ್ರೀಯ ಫುಟ್‌ಬಾಲ್‌ ಒಕ್ಕೂಟ(ಫಿಫಾ) ಸೋಮವಾರ ಬಿಡುಗಡೆ ಮಾಡಿರುವ

ನವದೆಹಲಿ: ಭಾರತೀಯ ಫುಟ್‌ಬಾಲ್‌ ತಂಡ ಅಂತರರಾಷ್ಟ್ರೀಯ ಫುಟ್‌ಬಾಲ್‌ ಒಕ್ಕೂಟ(ಫಿಫಾ) ಸೋಮವಾರ ಬಿಡುಗಡೆ ಮಾಡಿರುವ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ 105 ಸ್ಥಾನಕ್ಕೆ ಏರಿಕೆ ಕಂಡಿದೆ.
ಕಳೆದ ತಿಂಗಳು 107ನೇ ಸ್ಥಾನದಲ್ಲಿ ಬ್ಲ್ಯೂ ಟೈಗರ್ ಗಳು 2019ರ ಎಎಫ್ ಸಿ ಏಷ್ಯನ್ ಕಪ್ ಗೆ ಅರ್ಹತೆ ಪಡೆದ ಒಂದು ವಾರದಲ್ಲೇ 105ನೇ ಸ್ಥಾನ ಪಡೆದಿದ್ದಾರೆ.
ಅಕ್ಟೋಬರ್ 11ರಂದು ಯುಎಇನಲ್ಲಿ ನಡೆದ 2019ರ ಎಎಫ್ ಸಿ ಏಷ್ಯನ್ ಕಪ್ ನಲ್ಲಿ ಭಾರತ, ಮಕಾವೊ ವಿರುದ್ಧ 4-1 ಅಂತರದಿಂದ ಜಯ ಸಾಧಿಸಿರುವುದು ರ್ಯಾಂಕಿಂಗ್ ಏರಿಕೆಗೆ ಕಾರಣವಾಗಿದೆ.
2015ರ ಫೆಬ್ರುವರಿಯಲ್ಲಿ ಸ್ಟೀಫನ್‌ ಕಾನ್‌ಸ್ಟೆಂಟೈನ್‌ ಅವರು ತಂಡದ ಕೋಚ್‌ ಹುದ್ದೆಗೆ ನೇಮಕವಾದಾಗ 171ನೇ ಸ್ಥಾನದಲ್ಲಿದ್ದ ತಂಡ ಬಳಿಕ 173ನೇ ಸ್ಥಾನಕ್ಕೆ ಕುಸಿದಿತ್ತು. ಆ ನಂತರ ಹಂತ ಹಂತವಾಗಿ ಪ್ರದರ್ಶನ ಮಟ್ಟದಲ್ಲಿ ಸುಧಾರಣೆ ಕಂಡು, 2016ರ ಅಂತ್ಯಕ್ಕೆ 135ನೇ ಸ್ಥಾನಕ್ಕೇರಿತ್ತು. ಇದೀಗ ಇನ್ನಷ್ಟು ಉತ್ತಮ ಸಾಧನೆ ಮಾಡಿದೆ.
1996ರಲ್ಲಿ 94ನೇ ಸ್ಥಾನ ಗಳಿಸಿದ್ದು ಇದುವರೆಗಿನ ಅತ್ಯುತ್ತಮ ರ‍್ಯಾಂಕಿಂಗ್‌ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Basmati ಅಕ್ಕಿ ಭಾರತಕ್ಕೆ ಮಾತ್ರ ಸೀಮಿತವಲ್ಲ: ವಿಶೇಷ ಟ್ರೇಡ್‌ಮಾರ್ಕ್ ನೀಡಲು ಆಸ್ಟ್ರೇಲಿಯಾ ಕೋರ್ಟ್ ನಕಾರ, ರಫ್ತುದಾರರಲ್ಲಿ ಹೆಚ್ಚಿದ ಆತಂಕ

ಕೇರಳದ 19 ವರ್ಷದ ವಿದ್ಯಾರ್ಥಿನಿ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ; ಯಾರು ಈ ಅತಿಲೋಕ ಸುಂದರಿ?

ತಮಿಳುನಾಡಿನಲ್ಲಿ ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ, ಪರಂದೂರು ವಿಮಾನ ನಿಲ್ದಾಣಕ್ಕೆ ಬ್ರೇಕ್..!

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ಆಗಸ್ಟ್.31ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ವಾಲ್ಮೀಕಿ ನಿಗಮ ಹಗರಣ: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ BJP ಬೃಹತ್ ಪ್ರತಿಭಟನೆ, ಅಶೋಕ್-ವಿಜಯೇಂದ್ರ ಸೇರಿ ಹಲವರು ಪೊಲೀಸರ ವಶಕ್ಕೆ..!