ಢಾಕಾ: ಗುರ್ಜಂತ್ ಸಿಂಗ್ ಅವರ ಗೋಲಿನ ನೆರವಿನಿಂದ ಏಷ್ಯಾ ಕಪ್ ಹಾಕಿ 2017 ಸರಣಿಯ ಸೂಪರ್ 4ಘಟ್ಟದಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಭಾರತ ಡ್ರಾ ಗೆ ತೃಪ್ತಿ ಪಟ್ಟುಕೊಂಡಿದೆ. ನಿನ್ನೆ ನಡೆದ ಪಂದ್ಯದಲ್ಲಿ ಕೊರಿಯಾ ವಿರುದ್ಧ ಭಾರತೀಯ ತಂಡ 1-1ರ ಗೋಲುಗಳಿಂದ ಸಮಬಲ ಸಾಧಿಸಿದೆ.
ಪಂದ್ಯದ ಮೊದಲಾರ್ಧದಲ್ಲಿ ಎರ್ಡೂ ತಂದದವರಿಂದ ಯಾವ ಗೋಲುಗಳೂ ದಾಖಲಾಗಿರಲಿಲ್ಲ. ಆದರೆ ದ್ವಿತಿಯಾರ್ಧದ ಕ್ವಾರ್ಟರ್ 3 ರಲ್ಲಿ ಲೀ ಜಂಗ್‌ಜನ್ ಕೊರಿಯಾ ಪರ ಗೋಲು ದಾಖಲಿಸಿ ಮುನ್ನಡೆಗೆ ಕಾರಣರಾದರು. ಆದರೆ ಪಂದ್ಯ ಅಂತ್ಯಗೊಳ್ಳಲು ಇನ್ನೇನು ಕೆಲವೇ ಕ್ಷಣಗಳಿರುವಾಗ ಭಾರತದ ಪರ ಗುರ್ಜಂತ್ ಸಿಂಗ್ ನಿರ್ಣಾಯಕ ಗೋಲು ದಾಖಲಿಸಿ ಭಾರತ ಸಮಬಲ ಸಾಧಿಸಲು ಕಾರಣರಾದರು.