ಒಡೆನ್ಸ್: ಭಾರತದ ಕಿಡಂಬಿ ಶ್ರೀಕಾಂತ್ ವಿಶ್ವ ಚಾಂಪಿಯನ್ ವಿಕ್ಟರ್ ಆಕ್ಸೆಲ್ಸನ್ ಅವರನ್ನು ಮಣಿಸಿ ಡೆನ್ಮಾರ್ಕ್ ಓಪನ್ ಸೆಮಿ ಫೈನಲ್ ತಲುಪಿದ್ದಾರೆ. ಇದೇ ವೇಳೆ ಸೈನಾ ನೆಹ್ವಾಲ್ ಮತ್ತು ಎಚ್.ಎಸ್. ಪ್ರನೋಯ್ ಡೆನ್ಮಾರ್ಕ್ ಓಪನ್ ವರ್ಲ್ಡ್ ಸೂರಪ್ ಸೀರೀಸ್ ಪ್ರೀಮಿಯರ್ ನ ಕ್ವಾರ್ಟರ್ ಫೈನಲ್ಸ್ ನಲ್ಲಿ ಸೋತು ಹಿಮ್ಮೆಟ್ಟಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ 8ನೇ ಶ್ರೇಯಾಂಕಿತ ಶ್ರೀಕಾಂತ್ ರಿಯೊ ಒಲಿಂಪಿಕ್ ಕಂಚಿನ ಪದಕ ವಿಜೇತ ಮತ್ತು 2ನೇ ಶ್ರೇಯಾಂಕದ ಆಕ್ಸೆಲ್ಸೆನ್ ಅವರನ್ನು 56 ನಿಮಿಷಗಳಲ್ಲಿ 14-21, 22-20, 21-7 ಸೆಟ್ ಗಳಿಂದ ಮಣಿಸಿದರು.
ಜಪಾನಿನ ನಾಲ್ಕನೇ ಶ್ರೇಯಾಂಕಿತ ಅಕೆನೆ ಯಮಾಗುಚಿ ಅವರು ಸೈನಾವನ್ನು 10-21, 13-21 ಸೆಟ್ ಅಂತರದಿಂದ ಸೋಲಿಸಿ ತಾವು ಸೆಮೀಸ್ ಪ್ರವೇಶಿಸಿದರು.
ದಕ್ಷಿಣ ಕೊರಿಯಾದ ಅಗ್ರ ಶ್ರೇಯಾಂಕಿತ ಸನ್ ವಾನ್ ಹೊ ವಿರುದ್ದ ಪ್ರನೋಯ್ 44 ನಿಮಿಷದ ಅವಧಿಯಲ್ಲಿ 13-21, 18-21 ಸೆಟ್ ಗಳಿಂದ ಪರಾಜಿತರಾದರು.