ಫ್ರೆಂಚ್ ಓಪನ್: ಎರಡನೇ ಸುತ್ತು ಪ್ರವೇಶಿಸಿದ ಸಿಂಧು, ಶ್ರೀಕಾಂತ್
ಪ್ಯಾರಿಸ್: ಪ್ರತಿಷ್ಠಿತ ಫ್ರೆಂಚ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬಾರತದ ಕಿಡಂಬಿ ಶ್ರೀಕಾಂತ್ ಮತ್ತು ಪಿವಿ ಸಿಂಧು ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
ಮೊನ್ನೆ ಕೊನೆಗೊಂಡ ಡೆನ್ಮಾರ್ಕ್ ಓಪನ್ ಸೂಪರ್ ಸಿರೀಸ್ ನಲ್ಲಿ ಚಾಂಪಿಯನ್ ಆಗಿದ್ದ ಶ್ರೀಕಾಂತ್, ಮೊದಲ ಸುತ್ತಿನಲ್ಲಿ 0-3 ಮುನ್ನಡೆ ಗಳಿಸಿದ್ದಾಗ ಶ್ರೀಕಾಂತ್ ಎದುರಾಳಿ ಜರ್ಮನಿಯ ಫ್ಯಾಬಿಯನ್ ರಾತ್ ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ನಿವೃತ್ತರಾದರು.
ಶ್ರೀಕಾಂತ್ ತಮ್ಮ ಮುಂದಿನ ಹೋರಾಟದಲ್ಲಿ ಹಾಂಕಾಂಗ್ ನ ವಾಂಗ್ ವಿಂಗ್ ಕಿ ವಿನ್ಸೆಂಟ್ ಅವರನ್ನು ಎದುರಿಸಲಿದ್ದಾರೆ.
ಸರಣಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು ಸ್ಪೇನ್ ನ ಬೀಟ್ರಿಜ್ ಕಾರ್ರಲೆಸ್ ಅವರನ್ನು 21-19 21-18ರ ಅಂತರದಲ್ಲಿ ಮಣಿಸಿ ಎರಡನೇ ಸುತ್ತಿಗೆ ಪ್ರವೇಶ ಗಿಟ್ಟಿಸಿದರು. ಸಿಂಧು ತಮ್ಮ ಮುಂದಿನ ಸುತ್ತಿನಲ್ಲಿ ಜಪಾನ್‌ನ ಸಯಾಕ ತಕಹಾಶಿ ಸವಾಲನ್ನು ಎದುರಿಸಬೇಕಿದೆ.