ಮಾರ್ಟಿನಾ ಹಿಂಗಿಸ್ 
ಕ್ರೀಡೆ

ಟೆನಿಸ್ ವೃತ್ತಿ ಜೀವನಕ್ಕೆ ಮಾರ್ಟಿನಾ ಹಿಂಗಿಸ್ ವಿದಾಯ

ಟೆನಿಸ್ ನಲ್ಲಿ ವಿಶ್ವದ ನಂ.1 ಡಬಲ್ಸ್ ಆಟಗಾರ್ತಿ ಈ ವಾರ ನದೆಯುವ ಡಬ್ಲ್ಯೂಟಿಎ ಫೈನಲ್ ಪಂದ್ಯಾವಳಿಯ ಬಳಿಕ ತಮ್ಮ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಲಿದ್ದಾರೆ

ಸಿಂಗಾಪುರ: ಟೆನಿಸ್ ನಲ್ಲಿ ವಿಶ್ವದ ನಂ.1 ಡಬಲ್ಸ್ ಆಟಗಾರ್ತಿ ಈ ವಾರ ನದೆಯುವ ಡಬ್ಲ್ಯೂಟಿಎ ಫೈನಲ್ ಪಂದ್ಯಾವಳಿಯ ಬಳಿಕ ತಮ್ಮ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಲಿದ್ದಾರೆ
37ವರ್ಷ ದ ಸ್ವಿಸ್ ತಾರೆ ಈ ಹಿಂದೆ ಕೂಡ 2003, 2007ರಲ್ಲಿ ಎರಡು ಬಾರಿ ನಿವೃತ್ತಿ ಘೊಷಿಸಿದ್ದರು. ಆದರೆ 2013ರಲ್ಲಿ ಪುನಃ ವೃತ್ತಿ ಜೀವನ ಪ್ರಾರಂಭಿಸಿ ದಬಲ್ಸ್ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
23 ವರ್ಷ ಗಳ ವೃತ್ತಿ ಬದುಕಿನಲ್ಲಿ 25 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿರುವ ಹಿಂಗಿಸ್ 5 ಸಿಂಗಲ್ಸ್, 7 ಮಿಶ್ರ ಡಬಲ್ಸ್ ಹಾಗೂ 13 ಮಹಿಳಾ ಡಬಲ್ಸ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
"ನಾನು ವೃತ್ತಿ ಜೀವನಕ್ಕೆ ಕಾಲಿಟ್ಟು 23 ವರ್ಷ ಕಳೆದಿದೆ. ಇದನ್ನು ನನಗೆ ನಂಬಲು ಕಷ್ತವಾಗುತ್ತಿದೆ. ಸಿಂಗಾಪುರದಲ್ಲಿ ಕೊನೆಯ ಪಂದ್ಯವನ್ನಾಡಲು ನಿರ್ಧರಿಸಿದ್ದೇನೆ" ತಮ್ಮ ನಿವೃತ್ತಿಯ ಕುರಿತಂತೆ ಹಿಂಗಿಸ್ ಹೀಗೆಂದು ಬರೆದುಕೊಂಡಿದ್ದಾರೆ.
ಮಾರ್ಟಿನಾ ಅವರು ಈ ವಾರದಲ್ಲಿ ಸಿಂಗಾಪುರದಲ್ಲಿ ನದೆಯುವ ಡಬ್ಲ್ಯೂಟಿಎ ಫೈನಲ್ ನಲ್ಲಿ, ತೈವಾನಿನ ಚಾನ್ ಯುಂಗ್ ಜಾನ್ ಜತೆಯಾಗಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

SCROLL FOR NEXT