ನ್ಯೂಯಾರ್ಕ್: ಭಾರತದ ಅಗ್ರ ಮಹಿಳಾ ಡಬಲ್ಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಅಮೆರಿಕನ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಮೆಂಟ್ ನಲ್ಲಿ ಸೆಮಿಫೈನಲ್ ಗೆ ಪ್ರವೇಶಿಸಿದ್ದಾರೆ.
ಮಹಿಳಾ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ನಲ್ಲಿ ಜೀನಾದ ಶೂಯಿ ಪೆಂಗ್ ಜೊತೆ ಕಣಕ್ಕಿಳಿದಿದ್ದ ಸಾನಿಯಾ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದರು
ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕಿತರಾದ ಇಂಡೋ-ಚೀನಾ ಜೋಡಿಯು ಹಂಗೇರಿಯಾದ ಟಿಮಿಯಾ ಬಾಬೂಸ್ ಮತ್ತು ಜೆಕ್ ಗಣರಾಜ್ಯದ ಆಂಡ್ರಿಯಾ ಹ್ಲಾವಾಕೋವಾ ವಿರುದ್ಧ 7-6 (5), 6-4 ರ ಅಂತರದಲ್ಲಿ ಗೆಲುವು ದಾಖಲಿಸಿದರು.
ಈ ಹಿಂದೆ ನಡೆದ ವಿಂಬಲ್ಡನ್ ಹಾಗೂ ಫ್ರೆಂಚ್ ಓಪನ್ ಮೊದಲ ಸುತ್ತಿನಿಂದಲೇ ಹೊರನಡೆದಿದ್ದ ಸಾನಿಯಾ ಆಸ್ಟ್ರೇಲಿಯಾ ಓಪನ್ ನಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದರು. ಇದೀಗ ಪ್ರಸಕ್ತ ಸಾಲಿನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.
ಸಾನಿಯಾ ಜೋಡಿ ಇದೀಗ ಫೈನಲ್ ಪ್ರವೇಶಕ್ಕಾಗಿ ಮಾರ್ಟಿನಾ ಹಿಂಗಿಸ್ ಮತ್ತು ಯಂಗ್ ಜಾನ್ ಚಾನ್ ಜೋಡಿಯ ಸವಾಲನ್ನು ಎದುರಿಸಬೇಕಿದೆ.
ಮಾರ್ಟಿನಾ ಹಿಂಗಿಸ್ ಜತೆಯಾಗಿ ಆಡಿದ್ದಾಗ 2016ರಲ್ಲಿ ಅಗ್ರ ಶ್ರೇಯಾಂಕ ಅಲಂಕರಿಸಿದ್ದ ಸಾನಿಯಾ ಈಗ 9ನೇ ಸ್ಥಾನಕ್ಕೆ ಕುಸಿದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos