ಕ್ರೀಡೆ

ಕೊರಿಯಾ ಸೂಪರ್ ಸರಣಿ: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಪಿ.ವಿ.ಸಿಂಧು, ಸಮೀರ್ ವರ್ಮ

Sumana Upadhyaya
ಸಿಯೊಲ್: ಕೊರಿಯಾ ಮುಕ್ತ ಸೂಪರ್ ಸರಣಿ ಪಂದ್ಯದಲ್ಲಿ ಇಂದು ಭಾರತದ ಪಿ.ವಿ.ಸಿಂಧು ಮತ್ತು ಸಮೀರ್ ವರ್ಮ ನೇರ ಸೆಟ್ ಗಳಿಂದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಎರಡನೇ ಸುತ್ತಿನ ಪಂದ್ಯದಲ್ಲಿ ಪಾರುಪಳ್ಳಿ ಕಶ್ಯಪ್ ಸೋತು ನಿರ್ಗಮಿಸಿದ್ದಾರೆ.
ಒಲಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಥೈಲ್ಯಾಂಡ್ ನ ನಿಚ್ವಾನ್ ಜಿಂದಾಪೊಲ್ ಅವರನ್ನು 22-20, 21-17ರ ನೇರ ಸೆಟ್ ಗಳಿಂದ ಸೋಲಿಸಿದರು. ಇವರು ಕ್ಯಾರ್ಟರ್ ಫೈನಲ್ ನಲ್ಲಿ 2014ರ ವಿಶ್ವ ಚ್ಯಾಂಪಿಯನ್ ಕಂಚಿನ ಪದಕ ವಿಜೇತೆ ಜಪಾನ್ ನ ಮಿನಟ್ಸು ಮಿಟಾನಿ ಅವರನ್ನು ಎದುರಿಸಲಿದ್ದಾರೆ. ಮಿಟಾನಿ 2012ರಲ್ಲಿ ಫ್ರೆಂಚ್ ಮುಕ್ತ ಬ್ಯಾಡ್ಮಿಂಟನ್ ನಲ್ಲಿ ಅಂತಿಮ ಸುತ್ತಿನಲ್ಲಿ ಸೈನಾ ನೆಹ್ವಾಲ್ ಅವರನ್ನು ಸೋಲಿಸಿದ್ದರು.
ಹಾಂಗ್ ಕಾಂಗ್ ಸೂಪರ್ ಸಿರೀಸ್ ನಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಿದ್ದ ಮತ್ತು ಸೈಯದ್ ಮೋದಿ ಗ್ರಾಂಡ್ ಪ್ರಿಕ್ಸ್ ನ ಚಿನ್ನದ ಪದಕ ವಿಜೇತ ಸಮೀರ್ ಹಾಂಗ್ ಕಾಂಗ್ ನ ವಂಗ್ ವಿಂಗ್ ಕಿ ನಿನ್ಸೆಂಟ್ ಅವರನ್ನು 21-19 21-13 ಸೆಟ್ ಗಳಿಂದ 41 ನಿಮಿಷಗಳ ಕಾಲ ಆಟವಾಡಿ ಸೋಲಿಸಿದ್ದು ಕ್ವಾರ್ಟರ್ ಫೈನಲ್ ನಲ್ಲಿ ಹಾಂಗ್ ಕಾಂಗ್ ನ ಸೊನ್ ವಾನ್ ಹೊ ಅವರನ್ನು ಎದುರಿಸಲಿದ್ದಾರೆ.
SCROLL FOR NEXT