ಮಾಸ್ಕೋ: ರಷ್ಯಾದಲ್ಲಿ ನಡೆಯಲಿರುವ 2018ರ ಫಿಫಾ ಪುಟ್ಬಾಲ್ ವಿಶ್ವಕಪ್ ಟೂರ್ನಿಯ ಟಿಕೆಟ್ ಗಳ ಮಾರಾಟ ಪ್ರಕ್ರಿಯೆ ಆರಂಭವಾಗಿದೆ.
ಫಿಫಾ ಪುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ 64 ಪಂದ್ಯಗಳ ನಡೆಯಲಿದ್ದು ಪಂದ್ಯ ವೀಕ್ಷಣೆಗೆಗಾಗಿ ಅಭಿಮಾನಿಗಳು ಅಪೈಲ್ ಮಾಡಬಹುದು. ಕಡಿಮೆ ಮೊತ್ತದ ಟಿಕೆಟ್ 22 ಡಾಲರ್ ಆಗಿದ್ದು ಇನ್ನು ಪಂದ್ಯಾವಳಿಯ ಫೈನಲ್ ಪಂದ್ಯದ ಟಾಪ್ ಲೆವೆಲ್ ಸೀಟ್ ನ ಬೆಲೆ 1,100 ಡಾಲರ್ ಬೆಲೆ ಇದೆ.
ಪಂದ್ಯಾವಳಿಯ ಟಿಕೆಟ್ ಗಳು ರಷ್ಯಾ ಅಭಿಮಾನಿಗಳಿಗೆ ಮಾತ್ರ ಲಭ್ಯವಿದೆ. ಲಾಟರಿ ಸಿಸ್ಟಮ್ ಮೂಲಕ ಟಿಕೆಟ್ ಗಳನ್ನು ನೀಡಲಾಗುತ್ತದೆ. ಅಕ್ಟೋಬರ್ 12ರೊಳಗೆ ಅರ್ಜಿಗಳನ್ನು ಸ್ವೀಕರಿಸಿ ಡಿಸೆಂಬರ್ 1ರನ್ನು ಡ್ರಾ ಮಾಡಲಾಗುತ್ತದೆ. ಡಿಸೆಂಬರ್ 5ರಂದು ಎರಡನೇ ಹಂತದ ಅರ್ಜಿ ಸ್ವೀಕಾರ ನಡೆಯಲಿದೆ. ಪಂದ್ಯಾವಳಿಯ 2018ರ ಜೂನ್ 14 ರಿಂದ ಜುಲೈ 15ರವರೆಗೆ ನಡೆಯಲಿದೆ.