ಕ್ರೀಡೆ

ಕೊರಿಯಾ ಸೂಪರ್ ಸೀರೀಸ್: ಫೈನಲ್ ಪ್ರವೇಶಿಸಿದ ಪಿವಿ ಸಿಂಧು

Raghavendra Adiga
ಸಿಯೋಲ್ : ಕೊರಿಯಾ ಸೂಪರ್ ಸೀರೀಸ್  ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ನಲ್ಲಿ ಚೀನಾದ ಬಿಂಗ್ ಜಿವೊ ಅವರನ್ನು ಪರಾಭವ ಗೊಳಿಸಿ ಪಿ.ವಿ.ಸಿಂಧು ಫೈನಲ್ಸ್ ಪ್ರವೇಶಿಸಿದರು. 
ಸಿಂಧು ಸೆಮಿ ಫೈನಲ್ಸ್ ನಲ್ಲಿ ಚೀನಾ ಆಟಗಾರ್ತಿಯ ವಿರುದ್ಧ 21-10, 17-21, 21-16 ಅಂತರದಿಂದ ಜಯ ಸಾಧಿಸಿದರು.
2014ರ ವಿಶ್ವ ಚ್ಯಾಂಪಿಯನ್ ಕಂಚಿನ ಪದಕ ವಿಜೇತೆ ಜಪಾನ್ ನ ಮಿನಟ್ಸು ಮಿಟಾನಿ ಅವರನ್ನು ಸಿಂಧು 21-19 16-21 21-10 ಸೆಟ್ ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.
ಸರಣಿಯ ಫೈನಲ್ಸ್ ನಲ್ಲಿ ಸಿಂಧು ಜಪಾನ್ ನ ನೊಝೊಮಿ ಓಕುರಾ ಅವರನ್ನು ಎದುರಿಸಲಿದ್ದಾರೆ.
SCROLL FOR NEXT