ಡೇವಿಸ್ ಕಪ್: ಬೋಪಣ್ಣ - ರಾಜಾ ಜೋಡಿ ಪರಾಭವ
ಭಾರತದ ರೋಹನ್ ಬೋಪಣ್ಣ ಮತ್ತು ಪುರವ್ ರಾಜಾ ಜೋಡಿಯು ಡೇವಿಸ್ ಕಪ್ ಪ್ಲೇ ಆಫ್ ಪಂದ್ಯದಲ್ಲಿ ಕೆನಡಾ ದ ಎದುರಾಳಿಗಳ ವಿರುದ್ಧ 5-7, 7-5, 7-6 ಅಂತರದಲ್ಲಿ ಸೋಲನ್ನನುಭವಿಸಿದ್ದಾರೆ.
ಎಡ್ಮಿಂಟನ್: ಭಾರತದ ರೋಹನ್ ಬೋಪಣ್ಣ ಮತ್ತು ಪುರವ್ ರಾಜಾ ಜೋಡಿಯು ಡೇವಿಸ್ ಕಪ್ ಪ್ಲೇ ಆಫ್ ಪಂದ್ಯದಲ್ಲಿ ಕೆನಡಾ ದ ಎದುರಾಳಿಗಳ ವಿರುದ್ಧ 5-7, 7-5, 7-6 ಅಂತರದಲ್ಲಿ ಸೋಲನ್ನನುಭವಿಸಿದ್ದಾರೆ. ಇದರಿಂದ ವರ್ಲ್ಡ್ ಗ್ರೂಪ್ ಗೆ ಆಯ್ಕೆಯಾಗುವ ಭಾರತದ ಕನಸಿಗೆ ಧಕ್ಕೆಯುಂಟಾಗಿದೆ.
ಕೆನಡಾ ದ ಡೇನಿಯಲ್ ನೆಸ್ಟರ್ ಮತ್ತು ವೇಸೆಕ್ ಪೋಸ್ಪಿಸ್ಲ್ ಜೋಡಿ ವಿರುದ್ಧ ಬೋಪಣ್ಣ ಜೋಡಿ ಪರಾಭವ ಅನುಭವಿಸಿದೆ. ಇದರಿಂದ ಕೆನಡಾ 2-1 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಂತಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.