ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಟ್ ಕೋಸ್ಚ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ತಂಡ ಸೋಲಿನ ಆರಂಭ ಮಾಡಿದೆ.
ಜಗತ್ತಿನ ನಂಬರ್ 10 ಸ್ಥಾನದಲ್ಲಿರುವ ಭಾರತ ಮಹಿಳಾ ಹಾಕಿ ತಂಡ ನಂಬರ್ 26ನೇ ಸ್ಥಾನದಲ್ಲಿರುವ ವೇಲ್ಸ್ ವಿರುದ್ಧ 2-3 ಗೋಲುಗಳಿಂದ ಸೋಲು ಕಂಡಿದೆ.
ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಮತ್ತು ನಿಕ್ಕಿ ಪ್ರದಾನ್ ತಲಾ ಒಂದು ಗೋಲು ಬಾರಿಸಿದ್ದು ಪ್ರಯೋಜನವಾಗಲಿಲ್ಲ.