ಕ್ರೀಡೆ

ಕಾಮನ್'ವೆಲ್ತ್ ಕ್ರೀಡಾಕೂಟ; ಕಂಚು ಗೆದ್ದ ಶೂಟರ್ ರವಿಕುಮಾರ್

Manjula VN
ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯ ರಾಷ್ಟ್ರದ ಗೋಲ್ಡ್ ಕೋಸ್ಟ್'ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ರವಿಕುಮಾರ್ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ. 
ಕ್ರೀಡಾಕೂಟಡ ನಾಲ್ಕನೇ ದಿನವಾಗಿರುವ ಇಂದು ರವಿಕುಮಾರ್ ಅವರು 10 ಮೀಟರ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. 
ಇದರೊಂದಿಗೆ ಭಾನುವಾರ ಭಾರತಕ್ಕೆ ಒಟ್ಟು ನಾಲ್ಕು ಪದಕಗಳು ದಕ್ಕಿವೆ. ವೇಟ್ ಲಿಫ್ಟಿಂಗ್ ನಲ್ಲಿ ಪೂನಮ್ ಯಾದವ್ ಅವರು ಮಹಿಳೆಯರ 69 ಕೆ.ಜಿ ವಿಭಾಗದಲ್ಲಿ ಚಿನ್ನವನ್ನು ಗೆದ್ದಿದ್ದರೆ, ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ನಲ್ಲಿ ಮರು ಬಾಕೆರ್ ಚಿನ್ನ ಗೆದ್ದಿದ್ದುರೆ. ಇದರೆ, ಹೀನಾ ಸಿಧು ಅವರೂ ಕೂಡ ಬೆಳ್ಳಿ ಪಡೆದುಕೊಂಡಿದ್ದಾರೆ. 
SCROLL FOR NEXT