ಕ್ರೀಡೆ

ಕಾಮನ್ ವೆಲ್ತ್ ಕ್ರೀಡಾ ಕೂಟ: 60 ಕೆಜಿ ವಿಭಾಗದಲ್ಲಿ ಸೆಮಿ ಫೈನಲ್ಸ್ ಪ್ರವೇಶಿಸಿದ ಬಾಕ್ಸರ್ ಮನೀಷ್

Srinivas Rao BV
ಗೋಲ್ಡ್ ಕೋಸ್ಟ್: ಬಾಕ್ಸರ್ ಮನೀಷ್ ಕೌಶಿಕ್ ಕಾಮನ್ ವೆಕ್ತ್ ಕ್ರೀಡಾ ಕೂಟದ 60 ಕೆಜಿ ವಿಭಾಗದಲ್ಲಿ ಸೆಮಿ ಫೈನಲ್ಸ್ ತಲುಪಿದ್ದಾರೆ. 
ಇಂಗ್ಲೆಂಡ್ ನ ಕ್ಯಾಲಮ್ ಫ್ರೆಂಚ್ ಅವರನ್ನು 5:0 ಅಂತರದಿಂದ ಮಣಿಸಿ ಮನೀಷ್ ಸೆಮಿ ಫೈನಲ್ಸ್ ತಲುಪಿದ್ದು, ಭಾರತಕ್ಕೆ ಮತ್ತೊಂದು ಪದಕ ಸಿಗುವ ಸಾಧ್ಯತೆ ದಟ್ಟವಾಗಿದೆ. 
ನಿರ್ದಿಷ್ಟ ತೂಕದ ವಿಭಾಗಗಳಲ್ಲಿ ಈಗಾಗಲೇ ಭಾರತದ ಬಾಕ್ಸರ್ ಗಳಾದ ಗೌರವ್ ಸೋಲಂಕಿ ಹಾಗೂ ವಿಕಾಸ್ ಕೃಷ್ಣನ್ ಯಾದವ್ ಸೆಮಿ ಫೈನಲ್ಸ್ ತಲುಪಿದ್ದಾರೆ. ಗೌರವ್ ಶುಕ್ರವಾರ ನಡೆಯಲಿರುವ ಸೆಮಿ-ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ವಿದಾನಲೇಂಗ್ ಇಶನ್ ಬಂಧರಾ ವಿರುದ್ಧ ಸೆಣೆಸಲಿದ್ದಾರೆ. 
SCROLL FOR NEXT