ಗೋಲ್ಡ್ ಕೋಸ್ಟ್: ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬಾರತ ಮಹಿಳಾ ಹಾಕಿ ತಂಡವು ಸೆಮಿ ಫೈನಲ್ಸ್ ಹಂತದಲ್ಲಿ ಮೂರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಂಡಿದೆ.
ಭಾರತವು 0-1 ಗೋಲುಗಳ ಅಂತರದಲ್ಲಿ ಸೋಲನುಭವಿಸಿದೆ.
ಪಂದ್ಯದ ಮೂರನೇ ಸುತ್ತಿನಲ್ಲಿ ಗ್ರೇಸ್ ಸ್ಟೀವರ್ಟ್ ಅವರ ದಾಳಿ ಎದುರಿಸಲು ಭಾರತ ತಂಡದ ತರಬೇತುದಾರ ಹರೇಂದ್ರ ಸಿಂಗ್ ಭಾರತದ ಗೋಲ್ ಕೀಪರ್ ಸವಿತಾ ಪುನಿಯಾ ಅವರಿಗೆ ಎಚ್ಚರಿಕೆ ನೀಡಿದ್ದರು. ಪ<ದ್ಯ ಮುಗಿಯಲು ನಾಲ್ಕು ನಿಮಿಷಗಳಿರುವಾಗ ತರಬೇತುದಾರ ನಿಡಿದ ಎಚ್ಚರಿಕೆಯನ್ನು ಯಾವ ಆಟಗಾರರೂ ಗಣನೆಗೆ ತೆಗೆದುಕೊಂಡಿರಲಿಲ್ಲ.
ಭಾರತ ತಂಡವು ಕಂಚಿನ ಪದಕಕ್ಕಾಗಿ ಶನಿವಾರ ಇಂಗ್ಲೆಂಡ್ ವಿರುದ್ಧ ಸೆಣೆಸಲಿದೆ.