ಕ್ರೀಡೆ

ವಿಶ್ವ ರ್ಯಾಕಿಂಗ್: ನಂ.1 ಪಟ್ಟಕ್ಕೇರಿದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್

Manjula VN
ನವದೆಹಲಿ: ಇದೇ ಮೊದಲ ಬಾರಿದೆ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್ ಅವರು ವಿಶ್ವ ಬ್ಯಾಡ್ಮಿಂಟನ್ ರ್ಯಾಕಿಂಗ್'ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. 
ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್'ನ ಪುರುಷರ ಸಿಂಗಲ್ಸ್ ನಲ್ಲಿ ಶ್ರೀಕಾಂತ್ ಅವರು ನಂ.1 ಪಟ್ಟವನ್ನು ಪಡೆದುಕೊಂಡಿದ್ದಾರೆ. 
2017ನೇ ಸಾಲಿನಲ್ಲಿ ಶ್ರೀಕಾಂತ್ ಅವರು ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು, ದಾಖಲೆಯ 4 ಸೂಪರ್ ಸಿರೀಸ್ ಟೈಟಲ್ ಗಳನ್ನು ಗೆದ್ದಿದ್ದಾರೆ. ಇದರಿಂದಾಗಿ ಅವರ ರೇಟಿಂಗ್ ಪಾಯಿಂಟ್ಸ್ 76, 895ಕ್ಕೆ ತಲುಪಿತ್ತು. ಈ ಹಿಂದೆ ಭಾರತದ ಸೈನಾ ನೆಹ್ವಾಲ್ ಅವರು ವಿಶ್ವ ರ್ಯಾಕಿಂಗ್ ನಲ್ಲಿ ನಂ.1 ಪಟ್ಟವನ್ನು ಅಲಂಕರಿಸಿದ್ದರು. ಆದರೆ, ಪುರುಷರ ವಿಭಾಗದಲ್ಲಿ ಈ ರೀತಿಯ ಯಾವುದೇ ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ಮಾಡಿರಲಿಲ್ಲ. 
ಪ್ರಸ್ತುತ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಆಡುತ್ತಿರುವ ಶ್ರೀಕಾಂತ್ ಅವರು ಈಗಾಗಲೇ ಮಿಕ್ಸ್ಡ್ ಟೀಮ್ ವಿಭಾಗದಲ್ಲಿ ಆಡಿ ಭಾರತಕ್ಕೆ ಚಿನ್ನವನ್ನು ತಂದುಕೊಟ್ಟಿದ್ದಾರೆ. ಇನ್ನು ಪುರುಷರ ಸಿಂಗಲ್ಸ್ ಮಿಕ್ಸ್ಡ್ ಡಬಲ್ಸ್ ವಿಭಾಗದಲ್ಲಿ ಚಿನ್ನ ಗೆಲ್ಲುವುದು ಬಾಕಿಯಿದೆ.
ಫೆಬ್ರವರಿ ತಿಂಗಳಿನಲ್ಲಿ ಶ್ರೀಕಾಂತ್ ಅವರಿಗೆ ಮಹೀಂದ್ರ ಸ್ಕಾರ್ಪಿಯೋ ಟೈಮ್ಸ್ ಆಪ್ ಇಂಡಿಯಾ ಸ್ಫೋರ್ಟ್ಸ್ ಅವಾರ್ಡ್ ವತಿಯಿಂದ 'ಸ್ಫೋರ್ಟ್ಸ್ ಮ್ಯಾನ್ ಆಫ್ ದಿ ಇಯರ್' ಅವಾರ್ಡ್ ದೊರೆತಿತ್ತು. 
SCROLL FOR NEXT