ಸಂಗ್ರಹ ಚಿತ್ರ 
ಕ್ರೀಡೆ

ನೀವು ಭಾರತೀಯರಾಗಿ ಉಳಿದಿಲ್ಲ ಎಂದ ವ್ಯಕ್ತಿಗೆ ಸಾನಿಯಾ ಮಿರ್ಜಾ ತಿರುಗೇಟು!

ನೀವು ಭಾರತೀಯರಾಗಿ ಉಳಿದಿಲ್ಲ ಎಂದ ವ್ಯಕ್ತಿಗೆ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಆತನ ತಲೆ ತಿರುಗುವಂತೆ ಉತ್ತರ ನೀಡಿದ್ದು, ನಾನು ನನ್ನ ಭಾರತ ದೇಶಕ್ಕಾಗಿ ಆಡುತ್ತಿದ್ದೇನೆ, ನಾನು ಭಾರತೀಯಳು ಮತ್ತು ಭಾರತೀಯಳಾಗಿಯೇ ಇರುತ್ತೇನೆ ಎಂದು ಹೇಳಿದ್ದಾರೆ.

ನವದೆಹಲಿ: ನೀವು ಭಾರತೀಯರಾಗಿ ಉಳಿದಿಲ್ಲ ಎಂದ ವ್ಯಕ್ತಿಗೆ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಆತನ ತಲೆ ತಿರುಗುವಂತೆ ಉತ್ತರ ನೀಡಿದ್ದು, ನಾನು ನನ್ನ ಭಾರತ ದೇಶಕ್ಕಾಗಿ ಆಡುತ್ತಿದ್ದೇನೆ, ನಾನು ಭಾರತೀಯಳು ಮತ್ತು ಭಾರತೀಯಳಾಗಿಯೇ ಇರುತ್ತೇನೆ ಎಂದು ಹೇಳಿದ್ದಾರೆ.
ಕಥುವಾ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಸಾನಿಯಾ, "ಜಗತ್ತಿನ ಮುಂದೆ ನಾವು ಇಂತಹ ಒಂದು ದೇಶವೆಂದು ಅನಿಸಿಕೊಳ್ಳಬೇಕೆಂದು ಬಯಸುತ್ತಿದ್ದೇವೆಯೇ?, ನಮ್ಮ ಜಾತಿ, ವರ್ಣ, ಧರ್ಮ ಹಾಗೂ ಲಿಂಗವನ್ನು ಮರೆತು ಈ ಎಂಟರ ಬಾಲೆಗಾಗಿ ನಾವಿಂದು ಎದ್ದು ನಿಲ್ಲದೇ ಇದ್ದರೆ ನಾವು ಈ ಜಗತ್ತಿನಲ್ಲಿ ಯಾವುದೇ ವಿಚಾರಕ್ಕೂ ಎದ್ದು ನಿಲ್ಲುವವರಾಗುವುದಿಲ್ಲ. ಕನಿಷ್ಠ ಮಾನವತೆಗೂ ಕೂಡ. ನನಗೆ ಅಸಹನೆ ಮೂಡುತ್ತಿದೆ'' ಎಂದು ಸಾನಿಯಾ ಟ್ವೀಟ್ ಮಾಡಿದ್ದರು.
ಸಾನಿಯಾ ಟ್ವೀಟ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆಯಾದರೂ, ಕಿಚು ಕನ್ನನ್ ನಮೋ ಎಂಬ ಟ್ವಿಟರ್ ಖಾತೆದಾರರು, ನಿಮ್ಮ ಎಲ್ಲ ಗೌರವಗಳೊಂದಿಗೆ, ಮೇಡಂ, ನೀವು ಯಾವ ದೇಶದ ಬಗ್ಗೆ ಮಾತನಾಡುತ್ತಿದ್ದೀರಿ. ನೀವು ಒಬ್ಬ ಪಾಕಿಸ್ತಾನಿಯನ್ನು ವಿವಾಹವಾಗಿದ್ದೀರಿ. ನೀವು ಈಗ ಭಾರತೀಯರಲ್ಲ. ನಿಮಗೆ ಟ್ವೀಟ್ ಮಾಡಬೇಕೆಂದಿದ್ದರೆ, ಪಾಕ್ ಉಗ್ರ ಸಂಘಟನೆಗಳಿಂದ ಹತರಾದ ಮುಗ್ಧರ ಬಗ್ಗೆ ಟ್ವೀಟ್ ಮಾಡಿ'' ಎಂದು ಟ್ವೀಟ್ ಮಾಡಿ ಸಾನಿಯಾ ಕಾಲೆಳೆಯು ಪ್ರಯತ್ನ ಮಾಡಿದ್ದರು.
ಆದರೆ ಅವರ ಟ್ವೀಟ್ ಗೆ ಅವರದೇ ಧಾಟಿಯಲ್ಲಿ ಉತ್ತರ ನೀಡಿರುವ ಸಾನಿಯಾ, ಮೊದಲನೆಯದಾಗಿ ಮದುವೆ ಎಂಬುದು ವೈಯುಕ್ತಿಕ ವಿಚಾರ, ಎರಡನೆಯದಾಗಿ ನಿಮ್ಮಂತಹ ಕೀಳು ಜೀವಗಳು ನಾನು ಯಾವ ದೇಶಕ್ಕೆ ಸೇರಿದವಳು ಎಂದು ಹೇಳುವ ಹಾಗಿಲ್ಲ. ನಾನು ಭಾರತಕ್ಕಾಗಿ ಆಡುತ್ತೇನೆ, ನಾನೊಬ್ಬಳು ಭಾರತೀಯಳು ಹಾಗೂ ಮುಂದೆಯೂ ಭಾರತೀಯಳಾಗಿಯೇ ಇರುತ್ತೇನೆ. ನೀವು ಧರ್ಮ ಹಾಗೂ ದೇಶದ ಪರಿಧಿಯನ್ನು ದಾಟಿ ನೋಡಿದರೆ ನೀವು ಕೂಡ ಮಾನವತೆಗಾಗಿ ಎದ್ದು ನಿಲ್ಲುತ್ತೀರಿ'' ಎಂದು ಸಾನಿಯಾ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ