ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್ ಶಿಪ್‌: ಕ್ವಾರ್ಟರ್ ಫೈನಲ್ ಗೆ ಸೈನಾ, ಸಿಂಧು

ಚೀನಾದ ವುಹಾನ್ ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್ ಶಿಪ್‌ ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ...

ಪಿವಿ ಸಿಂಧು - ಸೈನಾ ನೆಹ್ವಾಲ್
Lingaraj Badiger
Updated On : 26 Apr 2018, 11:32 am
ವುಹಾನ್‌: ಚೀನಾದ ವುಹಾನ್ ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್ ಶಿಪ್‌ ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧು ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದಿದ್ದ ಸೈನಾ, ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್ ನಲ್ಲೂ ಗೆಲುವಿನ ಓಟ ಮುಂದುವರಿಸಿದ್ದು, ಇಂದು ಚೀನಾದ ಗೌವೊ ಫಾಂಗ್ ಜಿ ವಿರುದ್ಧ 21-18, 21-8 ಅಂತರದ ಗೆಲುವು ದಾಖಲಿಸುವ ಎಂಟರ ಘಟ್ಟ ಪ್ರವೇಶಿಸಿದ್ದಾರೆ. 
ಕ್ವಾರ್ಟರ್‌ ಫೈನಲ್ ನಲ್ಲಿ ಸೈನಾ, ಕೊರಿಯಾದ ಲೀ ಜಾಂಗ್‌ ಮಿ ವಿರುದ್ಧ ಸೆಣಸಲಿದ್ದಾರೆ. 

Advertisement

Advertisement

ಒಲಿಂಪಿಕ್‌ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಸಹ, ಚೀನಾದ ಚೆನ್‌ ಕ್ಸಿಯಾಕ್ಸಿನ್ ವಿರುದ್ಧ 21-12, 21-15 ಅಂತರದ ಗೆಲುವು ದಾಖಲಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 
ಇನ್ನು ಪುರುಷ ಸಿಂಗಲ್ಸ್ ವಿಭಾಗದಲ್ಲೂ ಅಗ್ರ ಶ್ರೇಯಾಂಕಿತ ಕಿಡಂಬಿ ಶ್ರೀಕಾಂತ್ ಮತ್ತು ಜಾಗತಿಕ ರ‍್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಎಚ್‌.ಎಸ್‌. ಪ್ರಣೋಯ್‌ ಕೂಡ ಕ್ವಾಟರ್ ಫೈನಲ್ ಪ್ರವೇಶಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement