ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಶಿಪ್: ಫೈನಲ್ಸ್ ಪ್ರವೇಶಿಸಿದ ಪಿ.ವಿ ಸಿಂಧು

ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಭಾರತದ ಪಿ.ವಿ ಸಿಂಧು ಜಪಾನ್ ನ ನೋಜೊಮಿ ಒಕುಹರಾ ಅವರನ್ನು ಮಣಿಸಿ ಸೆಮಿ ಫೈನಲ್ಸ್ ಪ್ರವೇಶಿಸಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಸೆಮಿ ಫೈನಲ್ಸ್ ನಲ್ಲೂ ಜಯಗಳಿಸಿದ್ದು ಫೈನಲ್ಸ್ ಪ್ರವೇಶಿಸಿದ್ದಾರೆ.

ಪಿ.ವಿ ಸಿಂಧು
Srinivas Rao BV
Updated On : 4 Aug 2018, 8:57 am
ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಭಾರತದ ಪಿ.ವಿ ಸಿಂಧು ಜಪಾನ್ ನ ನೋಜೊಮಿ ಒಕುಹರಾ ಅವರನ್ನು ಮಣಿಸಿ ಸೆಮಿ ಫೈನಲ್ಸ್ ಪ್ರವೇಶಿಸಿದ್ದ  ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಸೆಮಿ ಫೈನಲ್ಸ್ ನಲ್ಲೂ ಜಯಗಳಿಸಿದ್ದು ಫೈನಲ್ಸ್ ಪ್ರವೇಶಿಸಿದ್ದಾರೆ. 
ಆ.04 ರಂದು ನಡೆದ ಪಂದ್ಯದಲ್ಲಿ ಪಿವಿ ಸಿಂಧು ತಮ್ಮ ಎದುರಾಳಿ, ವಿಶ್ವದ ಮೂರನೇ ಆಟಗಾರ್ತಿಯಾಗಿರುವ ಜಪಾನ್ ನ ಅಕಾನೆ ಯಮಾಗುಚಿ ಅವರನ್ನು 21-16, 24-22 ಅಂತರದಿಂದ ಮಣಿಸಿದ್ದು, ಮೊದಲ ಹಂತದಲ್ಲಿ 21-16 ಅಂತರದಿಂದ ಗೆದ್ದ ಸಿಂಧು, ಎರಡನೇ ಹಂತದಲ್ಲಿ ಯಮಾಗುಚಿ ವಿರುದ್ಧ ಸ್ವಲ್ಪ ಮಂಕಾದರು ಆದರೆ ಮತ್ತೆ ಪುಟಿದೆದ್ದ ಸಿಂಧು ಸುಲಭವಾಗಿ ಜಯ ಗಳಿಸಿ ಫೈನಲ್ಸ್ ಪ್ರವೇಶಿಸಿದ್ದಾರೆ. 
ಕ್ರೋಷಿಯಾದ ಮರಿನ್ ಸಿಲಿಕ್ ಅವರನ್ನು ಸಿಂಧು ಫೈನಲ್ಸ್ ನಲ್ಲಿ ಎದುರಿಸಲಿದ್ದಾರೆ. ಆ.03 ರಂದು ನಡೆದ  ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ  21-17, 21-19 ಸೆಟ್ ಗಳ ಅಂತರದಿಂದ ಸಿಂಧು ನೋಜೊಮಿ ಒಕುಹರಾ ಅವರನ್ನು ಮಣಿಸಿ ಸೆಮಿ ಫೈನಲ್ಸ್ ಪ್ರವೇಶಿಸಿದ್ದರು. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments