ಅಜಯ್ ಜಯರಾಮ್ 
ಕ್ರೀಡೆ

ಬ್ಯಾಡ್ಮಿಂಟನ್: ವಿಯೆಟ್ನಾಂ ಓಪನ್ ಫೈನಲ್ ಪ್ರವೇಶಿಸಿದ ಅಜಯ್ ಜಯರಾಮ್

ಪ್ರತಿಷ್ಠಿತ ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಅಜಯ್ ಜಯರಾಮ್ ಫೈನಲ್‌ ಸುತ್ತಿಗೆ ಪ್ರವೇಶಿಸಿದ್ದಾರೆ.

ವಿಯಟ್ನಾಂ: ಪ್ರತಿಷ್ಠಿತ ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತದ  ಅಜಯ್ ಜಯರಾಮ್ ಫೈನಲ್‌ ಸುತ್ತಿಗೆ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ಸ್ ನಲ್ಲಿ ಜಪಾನ್‌ನ ಯೂ ಇಗರಾಶಿ ಅವರನ್ನು 21-14 21-19 ಅಂತರದಲ್ಲಿ ಮಣಿಸಿದ ಅಜಯ್ ಅಂತಿಮ ಸುತ್ತಿಗೆ ಲಗ್ಗೆ ಇಟ್ಟರು.
ಸರಣಿ ಪ್ರಾರಂಭದಿಂದಲೂ ಶ್ರೇಷ್ಠ ಪ್ರದರ್ಶ್ನಾ ನೀಡುತ್ತಾ ಬಂದಿರುವ .ಅಜಯ್ ಜಯರಾಮ್ ಸೆಮಿಫೈನಲ್ಸ್ ನಲ್ಲಿ ಒಟ್ಟು 34 ನಿಮಿಷಗಳ ಹೋರಾಟ ನಡೆಸಿ ಎದುರಾಳಿಯನ್ನು ಮಣ್ಣು ಮುಕ್ಕಿಸಿದ್ದಾರೆ.
ಜುಲೈ ತಿಂಗಳಿನಲ್ಲಿ ನಡೆದಿದ್ದ ವೈಟ್ ನೈಟ್ಸ್ ಸರಣಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ ಅಜಯ್ ಜಯರಾಮ್ ಇದೀಗ ವಿಯೆಟ್ನಾ ಓಪನ್ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದ್ದು ಪ್ರಶಸ್ತಿ ಜಯಿಸಲು ಅವರು ವಿಶ್ವ ನಂ. 79ನೇ ಶ್ರೇಯಾಂಕದ ಇಂಡೋನೇಷಿಯಾ ಆಟಗಾರ  ಶೇಸರ್ ಹೈರನ್ ರುಸ್ತವಿಟೊ ಅವರನ್ನು ಎದುರಿಸಲು ಸಿದ್ದವಾಗಿದ್ದಾರೆ.
ಇದೇ ವೇಳೆ ನಡೆದ ಇನ್ನೊಂದು ಸೆಮಿಫೈನಲ್ಸ್ ನಲ್ಲಿ ಭಾರತದ ಮಿಥುನ್ ಮಂಜುನಾಥ್, ಇಂಡೋನೇಷಿಯಾದ ಶೆಸರ್ ವಿರುದ್ಧ 21-17 19-21 21-14 ಅಂತರದಲ್ಲಿ ಪರಾಭವಗೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್