ನವದೆಹಲಿ: 1984 ರ ಲಾಸ್ ಏಂಜಲೀಸ್ ಒಲಂಪಿಕ್ ನಲ್ಲಿ ಕೆಲವೇ ಮಿಲಿ ಸೆಕೆಂಡ್ ಅಂತರದಲ್ಲಿ ಪದಕ ವಂಚಿತರಾಗಿದ್ದ ಪಿಟಿ ಉಷಾ ಅವರಿಗೆ ಕ್ರೀಡಾ ಗ್ರಾಮದಲ್ಲಿ ಕೇವಲ ಗಂಜಿ ಉಪ್ಪಿನಕಾಯಿಯನ್ನಷ್ಟೇ ತಿನ್ನುವಂತೆ ಒತ್ತಡವಿತ್ತು!
ಯಾವುದೇ ಪೌಷ್ಟಿಕಾಂಶವಿಲ್ಲದ ಆಹಾರವಿದಾಗಿದ್ದು ಇದನ್ನು ಹೊರತು ಏನೂ ತಿನ್ನಲು ಸಾಧ್ಯವಿರಲಿಲ್ಲ ಎಂದು ಪಿಟಿ ಉಷಾ ಅಂದಿನ ದಿನಗಳನ್ನು ನೆನೆಯುತ್ತಾ ಹೇಳಿದ್ದಾರೆ.
"ಕಡೆಯ 35 ಮೀಟರ್ ಗಳನ್ನು ಕ್ರಮಿಸಲು ನನಗೆ ಸಾಕಷ್ಟು ಶಕ್ತಿ ಇಲ್ಲದಿದ್ದದ್ದು ನನ್ನ ಅಂದಿನ ಪ್ರದರ್ಶನದ ಮೇಲೆ ಪರಿಣಾಮ ಬೀರುವಂತಿತ್ತು" ಎಂದು ಅವರು ಹೇಳಿದ್ದಾರೆ.
ಅಂತಿಮ 400 ಮೀಟರ್ ಹರ್ಡಲ್ ನಲ್ಲಿ ಉಷಾ ಮತ್ತು ರೊಮೇನಿಯಾದ ಕ್ರಿಸ್ಟಿಯಾನಾ ಕೊಜೊಕಾರ ಅವರುಗಳು ನಿಗದಿತ ವೇಳೆಯಲ್ಲಿಯೇ ಗುರಿಯನ್ನು ತಲುಪಿದ್ದರೂ ಸಹ ಅವರನ್ನು ನಿರ್ಣಾಯಕ ಪಂದ್ಯದಿಂದ ದೂರ ಇಡಲಾಗಿತ್ತು.ಆ ದಿನಗಳಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಮಾತ್ರ ಅಗತ್ಯ ಸೌಲಭ್ಯಗಳು ಸಿಗುತ್ತಿರಲಿಲ್ಲ.
"ಅಸಾಧಾರಣ ಸೌಕರ್ಯಗಳನ್ನು ಅನುಭವಿಸುತ್ತಿರುವ ಇತರ ದೇಶಗಳ ಕ್ರೀಡಾಪಟುಗಳನ್ನು ನಾವು ಅಸೂಯೆಯಿಂದ ನೋಡಬೇಕಾಗಿತ್ತು.ನಾವು ಸಹ ಅವರು ಪಡೆದ ಸೌಕರ್ಯವನ್ನು ಮುಂದೆ ಎಂದಾದರೂ ಪಡೆಯಲಿದ್ದೇವೆಯೆ ಎನ್ನುವುದು ನಮ್ಮ ಆಲೋಚನೆಯಾಗಿತ್ತು." ಉಷಾ ಹೇಳುತ್ತಾರೆ.
ಕೇರಳದಲ್ಲಿ ನಾವು ಉಪ್ಪಿನಕಾಯಿಗೆ ನಾವು ಕಾಡು ಮಂಗ ಅಚಾರ್' ಎಂದು ಕರೆಯುತ್ತೇವೆ ಮತ್ತು ಅದು ಹಣ್ಣಾಗುವ ಮುನ್ನದ ಮಾವಿನ ಉಪ್ಪಿನಕಾಯಿಯಾಗಿರುತ್ತದೆ. ನನಗೆ ಬೇಯಿಸಿದ ಆಲೂಗಡ್ಡೆ ಅಥವಾ ಅರ್ಧ ಬೇಯಿಸಿದ ಕೋಳಿಗೆ ಸೋಯಾ ಸಾಸ್ ಮತ್ತು ಕೆಲವು ಇತರ ವಿಶಿಷ್ಟ ಅಮೆರಿಕನ್ ಆಹಾರ ಹೊಂದುವುದಿಲ್ಲ.ಲಾಸ್ ಏಂಜಲೀಸ್ ನಲ್ಲಿ ನಾವು ಅಮೇರಿಕನ್ ಆಹಾರವನ್ನು ಮಾತ್ರ ಪಡೆಯುತ್ತೇವೆ ಎಂದು ಯಾರೂ ಹೇಳಲಿಲ್ಲ.ಯಾವುದೇ ಪೌಷ್ಟಿಕಾಂಶದ ಆಕರವಿಲ್ಲದ ಅಕ್ಕಿ ಗಂಜಿ ತಿನ್ನುವುದು ಬಿಟ್ಟು ನಮಗೆ ಬೇರೆ ಆಯ್ಕೆಗಳಿರಲಿಲ್ಲ.ಶಕ್ತಿಯ ಮಟ್ಟವನ್ನು ಉಳಿಸಿಕೊಳ್ಳಲಾಗದ ಕಾರಣ ನಾನು ಪ್ರದರ್ಶನದ ಕಡೆಯಲ್ಲಿ ನನ್ನ ಕಾರ್ಯಕ್ಷಮತೆಯನ್ನು ಖಂಡಿತವಾಗಿಯೂ ತಲುಪಲಾಗಲಿಲ್ಲ.
ಸಧ್ಯ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಎನ್ನುವ ತರಬೇತುದಾರ ಅಕಾಡೆಮಿಯನ್ನು ನಡೆಸುತ್ತಿರುವ ಉಷಾ ವಿಧ ಸ್ಪರ್ಧೆಗಳಲ್ಲಿ ಭಾರತಕ್ಕೆ 18 ಪದಕಗಳನ್ನು ಗೆದ್ದಿದ್ದಾರೆ.
1984 ರ ಅನುಭವ ನನಗೆ ಅಪೂರ್ವ ಅನುಭವವಾಗಿತ್ತು. ಈಗ ನನ್ನ ಜೀವನವು ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಗಾಗಿ ಮೀಸಲಾಗಿದೆ. ನನ್ನ ಶಾಲೆಯ ಕ್ರೀಡಾಪಟುಗಳಿಗೆ ನಾನು ಕ್ರೀಡಾಪಟುವಾಗಿ ನಿರಾಕರಿಸಲ್ಪಟ್ಟ ವಿಷಯಗಳನ್ನು ನೀಡಲು ಪ್ರಯತ್ನಿಸುತ್ತಿದೆ. ಸಧ್ಯ ನನ್ನಲ್ಲಿ ಹದಿನೆಂಟು ಯುವತಿಯರು ತರಬೇತಿ ಹೊಂದುತ್ತಿದ್ದಾರೆ ಎಂದು ಉಷಾ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos