ಏಷ್ಯನ್ ಕ್ರೀಡಾಕೂಟ: ಲಾಂಗ್ ಜಂಪ್ ನಲ್ಲಿ ನೀನಾ, ಸ್ಟೀಪಲ್ ಚೇಸ್‌ನಲ್ಲಿ ಸುಧಾಗೆ ರಜತ ಪದಕ!
ಜಕಾರ್ತಾ: ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಅಥ್ಲೀಟ್ ಗಳು ಪದಕ ಗಳಿಸುವಲ್ಲಿ ಪೈಪೋಟಿಯಲ್ಲಿದ್ದಾರೆ.
3000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಸುಧಾ ಸಿಂಗ್ ಬೆಳ್ಳಿ ಪದಕ ಗಳಿಸಿಕೊಂಡಿದ್ದರೆ ಲಾಂಗ್ ಜಂಪ್‌ನಲ್ಲಿ ನೀನಾ ವರಾಕಿಲ್ ಸಹ ರಜತ ಹಾರವನ್ನು ಕೊರಳಿಗೆ ಹಾಕಿಕೊಂಡಿದ್ದಾರೆ.
ಏಷ್ಯಾಡ್ ನಲ್ಲಿ ಲಾಂಗ್ ಜಂಪ್ (ಉದ್ದ ಜಿಗಿತ) ನಲ್ಲಿ ಬೆಳ್ಳಿ ಪದಕ ಗಳಿಸಿದ ಮೊದಲ ಭಾರತಿಯ ಮಹಿಳೆಯಾಗಿ ನೀನಾ ಹೊರಹೊಮ್ಮಿದ್ದಾರೆ.
27ರ ಹರೆಯದ ನೀನಾ 6.51 ಮೀ ದೂರಕ್ಕೆ ಜಿಗಿಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
6.55 ಮೀ. ದೂರ ಜಿಗಿದಿದ್ದ ವಿಯೆಟ್ನಾಂನ ಬುಯಿ ಥಿ ಥು ಥಾವೋ ಚಿನ್ನದ ಪದಕಕ್ಕೆ ಭಾಜನರಾದರು.