ಕ್ರೀಡೆ

'ಬರಿಗೈಯಲ್ಲಿ ವಾಪಸ್ಸಾದ್ರೆ ಅವಮಾನದಿಂದ ಸಾಯುವಿರಿ'; ಚಿನ್ನ ಗೆದ್ದ ತಜೀಂದರ್ ಪಾಲ್ ಬಿಚ್ಚಿಟ್ಟ ರಹಸ್ಯ!

Vishwanath S
ಜಕಾರ್ತ: ಇಂಡೋನೇಷ್ಯಾದ ಜಕಾರ್ತ ಮತ್ತು ಪಾಲೆಂಬಾಂಗ್ ನಗರಗಳಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಶಾಟ್ ಪುಟ್ ನಲ್ಲಿ ತಜೀಂದರ್ ಪಾಲ್ ಸಿಂಗ್ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಆದರೆ ಈ ಪದಕ ಸಾಧನೆ ಹಿಂದೆ ಅವರ ಕೋಚ್ ಅವರ ಮಾತುಗಳು ಎಷ್ಟು ಕಠೋರತೆ ಸೃಷ್ಟಿ ಮಾಡಿತ್ತು ಎಂಬುದನ್ನು ತಜೀಂದರ್ ಬಿಚ್ಚಿಟ್ಟಿದ್ದಾರೆ. 
ಶಾಟ್ ಪುಟ್ ಎಸೆತಗಾರ ತಜೀಂದರ್ ಪಾಲ್ ಸಿಂಗ್ ತೂರ್ 20.75 ಮೀಟರ್ ದೂರಕ್ಕೆ ಗುಂಡು ಎಸೆದು ಚಿನ್ನದ ಪದಕ ಗೆದ್ದಿದ್ದಾರೆ. ಈ ಸಾಧನೆಗೂ ಮುನ್ನ ಅಂಗಳದಲ್ಲಿ ತಜೀಂದರ್ ಪಾಲ್ ಕೋಚ್ ಎಂಎಸ್ ದಿಲೋನ್ ನೀವು ಪದಕ ಗೆಲ್ಲದಿದ್ದರೆ ಅನುಮಾನದಿಂದ ಸಾಯುವಿರಿ ಎಂದು ಕೂಗಿದ್ದರು. ಇದರಿಂದ ಆಕ್ರೋಶಗೊಂಡ ತಜೀಂದರ್ ಪಾಲ್ 20.75 ಮೀಟರ್ ದೂರಕ್ಕೆ ಎಸೆಯುವ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. 
ಆರಂಭದ ಎಸೆತಗಳಲ್ಲಿ ತಜೀಂದರ್ ಪಾಲ್ 20 ಮೀಟರ್ ಒಳಗೆ ಗುಂಡು ಎಸೆಯುತ್ತಿದ್ದರು. ಇದು ಕೋಚ್ ಆಕ್ರೋಶಕ್ಕೆ ಕಾರಣವಾಗಿತ್ತು. ಚಿನ್ನದ ಪದಕವನ್ನು ಗೆಲ್ಲಲೇಬೇಕು ಎಂಬ ಹಠದಿಂದಿದ್ದ ಕೋಚ್ ಮೈದಾನದಲ್ಲಿ ಸುಮ್ಮನೆ ಕೂರಲಿಲ್ಲ. ತಮ್ಮ ಶಿಷ್ಯನಿಗೆ ಕಠಿಣ ಮಾತುಗಳನ್ನು ಆಡುವ ಮೂಲಕ ಆತನಲ್ಲಿನ ಚೈತನ್ಯವನ್ನು ಹೊರಹೊಮ್ಮುವಂತೆ ಮಾಡಿದ್ದಾರೆ. ಇದರ ಫಲವಾಗಿ ಏಷ್ಯನ್ ಗೇಮ್ಸ್ ನ ಶಾಟ್ ಪುಟ್ ನಲ್ಲಿ ಭಾರತ ಚಿನ್ನದ ಪದಕ ಗೆಲ್ಲುವಂತಾಗಿದೆ.
ಇನ್ನೊಂದು ಸಂಗತಿ ಎಂದರೆ ತಜೀಂದರ್ ಪಾಲ್ ಸಿಂಗ್ ಅವರ ತಂದೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ರೀಡೆಯನ್ನೇ ಜೀವನವನ್ನಾಗಿಸಿಕೊಂಡಿರುವ ತಜೀಂದರ್ ಪಾಲ್ ತಮ್ಮ ಖಾಸಗಿ ಬದುಕಿನಲ್ಲಿ ಎಷ್ಟೇ ನೋವುಗಳಿದ್ದರು ಅವುಗಳನ್ನು ಬದಿಗಿಟ್ಟು ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಛಲದಂಕ ಮಲ್ಲನಂತೆ ಮೆರೆದಾಡಿದ್ದಾರೆ.
SCROLL FOR NEXT