ಭುವನೇಶ್ವರ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018ರ ಕ್ರೀಡಾಕೂಟದಲ್ಲಿ 100 ಓಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ತಂದ ದ್ಯುತಿ ಚಾಂದ್ ಗೆ ಒಡಿಶಾ ಸರ್ಕಾರ 1.5 ಕೋಟಿ ನಗದು ಬಹುಮಾನ ಘೋಷಿಸಿದೆ.
ನಿನ್ನೆ ನಡೆದ ಮಹಿಳೆಯರ 100 ಮೀ ಓಟದ ಸ್ಪರ್ಧೆಯ ಫೈನಲ್ ನಲ್ಲಿ ದ್ಯುತಿ ಚಾಂದ್ ಅವರು ಕೂದಲೆಳೆ ಅಂತದರಲ್ಲಿ ಅಗ್ರ ಸ್ಥಾನ ತಪ್ಪಿಸಿಕೊಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಆ ಮೂಲಕ ದ್ಯುತಿ ಬೆಳ್ಳಿ ಪದಕ ಗೆದ್ದರು. ಬಹ್ರೇನ್ ಮೂಲದ ಓಟಗಾರ್ತಿ ಎಡಿಡಿಯೋಂಗ್ ಓಡಿಯೊಂಗ್ ಅವರು ಒಟ್ಟು 11.30 ಸೆಕೆಂಡ್ ನಲ್ಲಿ ಓಟ ಪೂರ್ತಿ ಮಾಡಿದರೆ, ದ್ಯುತಿ 11.32 ಸೆಕೆಂಡ್ ನಲ್ಲಿ ಓಟ ಪೂರ್ತಿ ಮಾಡಿದ್ದರು. ಆ ಮೂಲಕ ಕೇವಲ .2 ಸೆಕೆಂಡ್ಸ್ ನಲ್ಲಿ ಚಿನ್ನದ ಪದಕ ವಂಚಿತರಾದರು.
ಆದರೂ 2ನೇ ಸ್ಥಾನ ಗಳಿಸುವ ಬೆಳ್ಳಿ ಗೆದ್ದು ರಾಷ್ಟ್ರಕ್ಕೆ ಗೌರವ ತಂದಿತ್ತರು. ದ್ಯುತ್ ಓಟ ಗೆದ್ದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ದ್ಯುತಿ ಅವರ ಸಾಧನೆಯನ್ನು ಕೊಂಡಾಡಿದ್ದರು. ಇದೀಗ ಒಡಿಶಾ ಸರ್ಕಾರ ಅವರಿಗೆ ಬರೊಬ್ಬರಿ 1.5 ಕೋಟಿ ನಗದು ಬಹುಮಾನ ಘೋಷಿಸಿದೆ.