ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯನ್ ಗೇಮ್ಸ್ ನಲ್ಲಿ ಸೈನಾ ನೆಹ್ವಾಲ್ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಸೈನಾ ನೆಹ್ವಾಲ್ ಭಾರತಕ್ಕೆ ಮೊದಲ ಬಾರಿಗೆ ಕಂಚಿನ ಪದಕ ತಂದುಕೊಟ್ಟಿರುವುದಕ್ಕೆ ಪ್ರಧಾನಿ ನರೇಂದ್ರಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಸೈನಾ ನೆಹ್ವಾಲ್
Nagaraja AB
Updated On : 28 Aug 2018, 12:20 pm

ನವದೆಹಲಿ:ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಮಹಿಳೆಯರ ಸಿಂಗಲ್ ಸುತ್ತಿನ ಬ್ಯಾಂಡ್ಮಿಟನ್ ಪಂದ್ಯದಲ್ಲಿ ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಸೈನಾ ನೆಹ್ವಾಲ್  ಭಾರತಕ್ಕೆ  ಮೊದಲ ಬಾರಿಗೆ ಕಂಚಿನ ಪದಕ ತಂದುಕೊಟ್ಟಿರುವುದಕ್ಕೆ ಪ್ರಧಾನಿ ನರೇಂದ್ರಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

18 ನೇ ಆವೃತ್ತಿಯ ಪಂದ್ಯದ ಸೆಮಿಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್  ಚೀನಾದ ತೈ ಝು ಯಿಂಗ್ ವಿರುದ್ಧ 17-21, 14-21 ನೇರ ಗೇಮ್ ಗಳಿಂದ ಪರಾಭವಗೊಂಡಿದ್ದರು.

ಸೈನಾ ನೆಹ್ವಾಲ್  ಏಷ್ಯನ್  ಗೇಮ್ಸ್ ನಲ್ಲಿ  ಮೊದಲ ಬಾರಿಗೆ  ಪದಕ ತಂದುಕೊಡುವ ಮೂಲಕ ಇತಿಹಾಸ ಬರೆಯುವುದರೊಂದಿಗೆ ನಮ್ಮೆಲ್ಲರಿಗೂ ಹೆಮ್ಮೆಯುಂಟುಮಾಡಿದ್ದಾರೆ ಎಂದು ನರೇಂದ್ರಮೋದಿ  ಶ್ಲಾಘಿಸಿದ್ದಾರೆ.

ಮತ್ತೊಂದು ಜಯಕ್ಕಾಗಿ ಸ್ಟಾರ್ ಬ್ಯಾಂಡ್ಮಿಟನ್ ಆಟಗಾರ್ತಿಯನ್ನು ಭಾರತ  ಅಭಿನಂದಿಸುತ್ತದೆ ಎಂದು ಪ್ರಧಾನಿ ಟ್ವಿಟ್ ಸಂದೇಶ ಮಾಡಿದ್ದಾರೆ.
ಸೈನಾ ನೆಹ್ವಾಲ್ ವಿಜಯಕ್ಕೆ ಕೇಂದ್ರ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ರಾಜ್ಯವರ್ದನ್ ಸಿಂಗ್ ರಾಥೊಡ್ ಶುಭ ಕೋರಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments