ಕ್ರೀಡೆ

ಏಷ್ಯಾಡ್ 2018: ಹಾಂಗ್ ಕಾಂಗ್ ಗೆ ಮಣಿತ ಭಾರತ ಪುರುಷರ ಸ್ಕ್ವಾಶ್ ಪಡೆಗೆ ಕಂಚು

Raghavendra Adiga
ಜಕಾರ್ತಾ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಭಾರತ ಪುರುಷರ ಸ್ಕ್ವಾಶ್ ತಂಡ ಹಾಂಗ್ ಕಾಂಗ್ ವಿರುದ್ಧ ಸೋತು ಕಂಚಿನ ಪದಕ ಗಳಿಸಿದೆ.
ಶುಕ್ರವಾರ ನಡೆದ ಸೆಮಿಫೈನಲ್ಸ್ ಹಣಾಹಣಿಯಲ್ಲಿ ಭಾರತ ತಂಡ ಬಲಿಷ್ಠ ಹಾಂಗ್ ಕಾಂಗ್ ವಿರುದ್ಧ 0-2 ಅಂತರದಲ್ಲಿ ಪರಾಜಿತವಾಗಿದೆ.
ಸೌರವ್ ಘೋಷಾಲ್,  ಹರೀಂದರ್ ಪಾಲ್ ಸಿಂಗ್ ಸಂಧು, ರಾಮತ್ ಟಂಡನ್ ಮತ್ತು ಮಹೇಶ್ ಮಂಗೊನಕರ್ ಅವರನ್ನೊಳಗೊಂಡಿದ್ದ ತಂಡ ಹಾಂಗ್ ಕಾಂಗ್ ಎದುರು ಸೋಲನುಭವಿಸಿ ಕಂಚಿನ ಪದಕಕ್ಕೆ ಸಮಾಧಾನಪಟ್ಟಿದೆ.
ಇದಕ್ಕೆ ಮುನ್ನ ಭಾರತ ಮಹಿಳಾ ಸ್ಕ್ವಾಶ್ ತಂಡವು ಹಾಲಿ ಚಾಂಪಿಯನ್ ಮಲೇಷಿಯಾವನ್ನು ಮನಿಸಿ ಫೈನಲ್ ಸುತ್ತು ಪ್ರವೇಶಿಸಿತ್ತು.
ಮುಂದಿನ ಅಂತಿಮ ಪಂದ್ಯದಲ್ಲಿ ಭಾರತೀಯ ವನಿತೆಯರು ಹಾಂಗ್ ಕಾಂಗ್ ತಂಡವನ್ನು ಎದುರಿಸಲಿದ್ದು ಚಿನ್ನ ಇಲ್ಲವೇ ಬೆಳ್ಳಿ ಪದಕ ಗಳಿಸುವುದು ನಿಶ್ಚಿತವಾಗಿದೆ.
SCROLL FOR NEXT