ಸೀಮಾ ಪುನಿಯಾ 
ಕ್ರೀಡೆ

ಏಷ್ಯನ್ ಕ್ರೀಡಾಕೂಟದ ಪಾಕೆಟ್ ಮನಿಯನ್ನು ಕೇರಳ ಸಂತ್ರಸ್ಥರಿಗೆ ನೀಡಿದ ಸೀಮಾ ಪುನಿಯಾ

ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತೆ, ಡಿಸ್ಕಸ್ ಎಸೆತ ಕ್ರೀಡಾತಾರೆ ಸೀಮಾ ಪುನಿಯಾ ಅವರು 700 ಡಾಲರ್ (ಸುಮಾರು 49000 ರೂ.) ಮೊತ್ತದ ತಮ್ಮ ಜಕಾರ್ತಾ ಪ್ರವಾಸಕ್ಕಾಗಿನ ಪಾಕೆಟ್ ಹಣ.....

ಜಕಾರ್ತಾ: ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತೆ, ಡಿಸ್ಕಸ್ ಎಸೆತ ಕ್ರೀಡಾತಾರೆ ಸೀಮಾ ಪುನಿಯಾ ಅವರು 700 ಡಾಲರ್ (ಸುಮಾರು 49,000 ರೂ.) ಮೊತ್ತದ ತಮ್ಮ ಜಕಾರ್ತಾ ಪ್ರವಾಸಕ್ಕಾಗಿನ ಪಾಕೆಟ್ ಹಣ ಹಾಗೂ ಹೆಚ್ಚುವರಿ ಒಂದು ಲಕ್ಷ ರೂ. ಅನ್ನು ಕೇರಳ ಪ್ರವಾಹ ಸಂತ್ರಸ್ಥರಿಗಾಗಿ ನಿಡಿದ್ದಾರೆ. 
35 ವರ್ಷದ ಸೀಮಾ ತಾವು ಕೇರಳಕ್ಕೆ ತರಳುವವರಿದ್ದು ಅಲ್ಲಿ ಕೆಲ ದಿನಗಳ ಕಾಲ ನೆಲೆಸಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಾಗಿ ಹೇಳುವ ಮೂಲಕ ಎಲ್ಲರಿಗೆ ಆದರ್ಶಪ್ರಾಯರಾಗಿದ್ದಾರೆ.
ಸೀಮಾ  2014 ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ್ದ ಪದಕ ಗಳಿಸಿದ್ದರಾದರೂ ಈ ಬಾರಿ ಕಂಚಿನ ಪದಕಕ್ಕಷ್ಟೇ ತೃಪ್ತಿ ಹೊಂದಬೇಕಾಗಿತ್ತು. 62.26 ಮೀ. ದೂರಕ್ಕೆ ಡಿಸ್ಕಸ್ ಎಸೆಯುವ ಮೂಲಕ ಸೀಮಾ ಕಂಚಿನ ಪದಕದ ಸಾಧನೆ ಮಾಡಿದ್ದರು.
ಸೀಮಾ ತಮ್ಮ ಸಹ ಕ್ರೀಡಾಪಟುಗಳಿಗೆ ಸಹ ಕೇರಳ ಸಂತ್ರಸ್ಥರಿಗೆ ಸಹಾಯ ನಿಡುವಂತೆ ಮನವಿ ಮಾಡಿದ್ದಾರೆ. ಕನಿಷ್ಟ ತಮ್ಮ ತಮ್ಮ ಪ್ರವಾಸಕ್ಕಾಗಿನ ಪಾಕೆಟ್ ಹಣದಲ್ಲಿ ಅರ್ಧದಷ್ಟನ್ನು ಕೇರಳ ನೆರೆ ಪರಿಹಾರಕ್ಕೆ ನಿಡುವಂತೆ ಅವರು ಕೇಳಿದ್ದಾರೆ.
ಏತನ್ಮಧ್ಯೆ ಹರಿಯಾಣ ಮೂಲದ ಸೀಮಾ ತನ್ನ ಬಲ ಪಾದದ ಮೂಳೆಯ ಸಮಸ್ಯೆಗೆ ಭಾರತಕ್ಕೆ ಮರಳಿದ ಬಳಿಕ ಚಿಕಿತ್ಸೆ ಪಡೆದುಕೊಳ್ಳುವುದಾಗಿಯೂ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT