ಕ್ರೀಡೆ

ವಿಜಯಪುರ: ಆರ್ಥಿಕ ಮುಗ್ಗಟ್ಟಿನಿಂದ ಸೌಕರ್ಯಗಳಿಲ್ಲದೆ ಪರದಾಡುತ್ತಿರುವ ಪಾರಾ ಅಥ್ಲೀಟ್ ಸುನಿಲ್

Sumana Upadhyaya

ವಿಜಯಪುರ: ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಜಯಗಳಿಸಿ ದೇಶಕ್ಕೆ ಕೀರ್ತಿ ತಂದ 24 ವರ್ಷದ ಪಾರಾ ಅಥ್ಲೀಟ್ ಸುನಿಲ್ ಆರ್ ರಾಥೋಡ್ ಇದೀಗ ಹಣಕಾಸು ಸಮಸ್ಯೆಯಿಂದ ಮತ್ತು ಅಭ್ಯಾಸಕ್ಕೆ ಮೂಲಭೂತ ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ಬೂತ್ನಾಲ್ ತಾಂಡಾ ನಿವಾಸಿಯಾಗಿರುವ ಸುನಿಲ್ ರಾಥೋಡ್ ಎರಡು ಪ್ರಮುಖ ಅಂತಾರಾಷ್ಟ್ರೀಯ ಪಾರಾ ಅಥ್ಲೆಟಿಕ್ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಿದ್ದಾರೆ. ಹೈ ಜಂಪ್, ಲಾಂಗ್ ಜಪ್ ಮತ್ತು ಡಿಸ್ಕಸ್ ಥ್ರೋದಲ್ಲಿ ನಾಲ್ಕು ಪದಕಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಅವರ ಪ್ರತಿಭೆ ನೋಡಿ ಭಾರತದ ಪಾರಾಲಂಪಿಕ್ ಸಮಿತಿ ದುಬೈಯಲ್ಲಿ ನಡೆಯಲಿರುವ ವಿಶ್ವ ಪಾರಾಲಂಪಿಕ್ ಚಾಂಪಿಯನ್ ಷಿಪ್ ಗೆ ಆಯ್ಕೆ ಮಾಡಿದೆ.

ಮುಂದಿನ ಪಂದ್ಯಗಳಲ್ಲಿ ಉತ್ತಮ ಅಭ್ಯಾಸ ಮಾಡಿ ಸಾಧನೆ ಮಾಡಲು ತಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಸುನಿಲ್ ವಿಜಯಪುರದಲ್ಲಿರುವ ಯುವಶಕ್ತಿ ಮತ್ತು ಕ್ರೀಡಾ ಸೇವೆ ಇಲಾಖೆಯ ಉಪ ನಿರ್ದೇಶಕ ಎಸ್ ಜಿ ಲೊನಿ ಅವರನ್ನು ಭೇಟಿ ಮಾಡಿ ಕೋಚ್ ಮತ್ತು ಅಭ್ಯಾಸ ಕಿಟ್ ಒದಗಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಅದಕ್ಕೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಜಿಲ್ಲಾಧಿಕಾರಿಯನ್ನು ಕೂಡ ಭೇಟಿ ಮಾಡಿದ್ದರು. ಅಲ್ಲಿ ಕೂಡ ಸುನಿಲ್ ಗೆ ನೆರವು ಸಿಕ್ಕಿಲ್ಲ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಹಲವು ಬಾರಿ ಕರೆ ಮಾಡಲು ಪ್ರಯತ್ನಿಸಿದರೂ ಲೊನಿ ಸಂಪರ್ಕಕ್ಕೆ ಸಿಗಲಿಲ್ಲ. ಜಿಲ್ಲಾಧಿಕಾರಿ ಸಂಜಯ್ ಬಿ ಶೆಟ್ಟನ್ನವರ್, ನಮ್ಮ ಅಧೀನದಲ್ಲಿ ಬರುವ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು ಎಂದಿದ್ದಾರೆ. ಸುನಿಲ್ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

SCROLL FOR NEXT