ಕ್ರೀಡೆ

ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ವಿವಾಹ ಬಿರುಸಿನ ತಯಾರಿ

Shilpa D
ಹೈದರಾಬಾದ್: ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ಡಿಸೆಂಬರ್ 16ರಂದು ಹೈದರಾಬಾದ್‌ನಲ್ಲಿ ವಿವಾಹ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. 
ಇದರಂತೆ ಅದ್ಧೂರಿ ಮದುವೆಗೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಸೈನಾ-ಕಶ್ಯಪ್ ಮದುವೆ ಸಮಾರಂಭದಲ್ಲಿ ಕೋಚ್ ಪುಲ್ಲೇಲಾ ಗೋಪಿಚಂದ್ ಸೇರಿದಂತೆ ಕ್ರೀಡಾ, ಸಿನೆಮಾ ಹಾಗೂ ರಾಜಕೀಯ ಕ್ಷೇತ್ರದ ಅನೇಕ ಗಣ್ಯ ವ್ಯಕ್ತಿಗಳು ಉಪಸ್ಥಿತರಿರಲಿದ್ದಾರೆ. 
ಕೆಲವು ಸಮಯಗಳ ಹಿಂದೆಯಷ್ಟೇ ಕಶ್ಯಪ್ ಜತೆಗಿನ ಪ್ರೇಮ ವಿಚಾರವನ್ನು ಸೈನಾ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದರು.
SCROLL FOR NEXT