ಕ್ರೀಡೆ

ಕಾಡು ಪ್ರಾಣಿಗಳ ಬೇಟೆಯಾಡಿದ ಆರೋಪ: ಅಂತರಾಷ್ಟ್ರೀಯ ಗಾಲ್ಫರ್ ಜ್ಯೋತಿ ರಾಂಧವ ಬಂಧನ

Manjula VN
ನವದೆಹಲಿ: ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಆರೋಪದ ಮೇಲೆ ಅಂತರಾಷ್ಟ್ರೀಯ ಗಾಲ್ಫರ್ ಜ್ಯೋತಿ ರಾಂಧವ ಅವರನ್ನು ಉತ್ತರಪ್ರದೇಶ ರಾಜ್ಯದ ಅರಣ್ ಇಲಾಖೆ ಅಧಿಕಾರಿಗಳು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ. 
ಬಂಧಿತ ಜ್ಯೋತಿ ರಾಂಧವ ಅವರಿಂದ ರೈಫಲ್,  ಕಾರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆಂದು ವರದಿಗಳು ತಿಳಿಸಿವೆ. 
ಜ್ಯೋತಿ ರಾಂಧವ ಅವರು ತಮ್ಮ ಸಹಚರನೊಂದಿಗೆ ಕರ್ತಾರ್ನಿಘಾಟ್ ಮೋತಿಪುರ್ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 
ಇದಲ್ಲದೆ ವಶಕ್ಕೆ ಪಡೆದಿರುವ ಕಾರಿನಲ್ಲಿ ಹಂದಿ ಚರ್ಮ, ಬೈನಾಕ್ಯುಲರ್ ಮತ್ತು ಬೇಟೆಗೆ ಸಂಬಂಧಿಸಿತ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. 
ಬಂಧನಕ್ಕೊಳಗಾಗಿರುವ ರಾಂಧವ ಅವರು 2004ರಿಂದ 2009ರವರೆಗೆ ವಿಶ್ವ ಗಾಲ್ಫ್ ರ್ಯಾಂಕಿಂಗ್ ಪಟ್ಟಿಯಲ್ಲಿ 100ರಲ್ಲಿ ಸ್ಥಾನ ಪಡೆದುಕೊಂಡಿದ್ದರು. ಅಲ್ಲದೆ, ಅಂತರಾಷ್ಟ್ರೀಯ ಶೂಟಿಂಗ್ ತರಬೇತಿಯನ್ನೂ ಪಡೆಯುತ್ತಿದ್ದರು. 
ಅರಣ್ಯ ಪ್ರದೇಶದ ನಿರ್ದೇಶಕ ರಮೇಶ್ ಪಾಂಡೆಯವರು ಈ ಕುರಿತಂತೆ ಪ್ರತಿಕ್ರಿಯೆ ನೀಡಿ, ರಾಂಧವ ಅವರು ಮೋತಿಪುರ್ ವಲಯದಲ್ಲಿ ಸ್ವಂತ ಫಾರ್ಮ್ ಹೊಂದಿದ್ದು, ಕಳೆದ 4-5 ದಿನಗಳಿಂದ ಈ ಭಾಗದಲ್ಲಿ ಕಾರಿನಲ್ಲಿ ಸುತ್ತಾಡುತ್ತಿದ್ದರು. ಇವರ ಓಡಾಟದಿಂದ ಅನುಮಾನಗೊಂಡು ಸಿಬ್ಬಂದಿಗಳು ಇಂದು ಬೆಳಿಗ್ಗೆ ಬಂಧನಕ್ಕೊಳಪಡಿಸಿದ್ದಾರೆಂದು ತಿಳಿಸಿದ್ದಾರೆ. 
SCROLL FOR NEXT