ನವದೆಹಲಿ: ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಮೇರಿ ಕೋಮ್ ಚಿನ್ನದ ಪದಕ ಗೆದ್ದಿದ್ದಾರೆ.
ಮಹಿಳೆಯರ 48 ಕೆಜಿ ವಿಭಾಗದ ಫೈನಲ್ ನಲ್ಲಿ ಮೇರಿ ಕೋಮ್ 4-1 ರಿಂದ ಫಿಲಿಫೈನ್ಸ್ ನ ಜೋಸ್ ಗಬುಕೋ ವಿರುದ್ಧ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಟ್ಟರು.
ಇನ್ನು ಪುರುಷರ 60 ಕೆಜಿ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಮನೀಷ್ ಕೌಶಿಕ್ ಚಿನ್ನ ಗೆದ್ದಿದ್ದಾರೆ. ಉಳಿದಂತೆ ಸಂಜೀತ್ ಚಿನ್ನ, ಎಲ್ ಸರಿತಾದೇವಿ ಬೆಳ್ಳಿ, ಸತೀಶ್ ಕುಮಾರ್ ಬೆಳ್ಳಿಯ ಪದಕಕ್ಕೆ ತೃಪ್ತರಾಗಿದ್ದಾರೆ.