ಕ್ರೀಡೆ

ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಫೈನಲ್ಸ್ ನಲ್ಲಿ ಜಾಂಗ್ ವಿರುದ್ಧ ಸಿಂಧುಗೆ ಸೋಲು

Srinivas Rao BV
ನವದೆಹಲಿ: ರಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಪಿ.ವಿ. ಸಿಂಧು  ಇಂಡಿಯಾ ಓಪನ್  ಬ್ಯಾಡ್ಮಿಂಟನ್ ಸರಣಿಯಲ್ಲಿ ಅಮೆರಿಕದ ಬಿವೆನ್ ಜಾಂಗ್ ವಿರುದ್ಧ ಸೋಲು ಕಂಡಿದ್ದಾರೆ. 
ಜಾಂಗ್ ವಿರುದ್ಧ 18-21, 21-11, 20-22ರ ಅಂತರದಲ್ಲಿ ಸಿಂಧು ಸೋಲು ಕಂಡಿದ್ದು, ನಿರಂತರವಾಗಿ ಕಠಿಣವಾದ ಪೈಪೋಟಿ ನೀಡಿದ್ದ ಪಿವಿ ಸಿಂಧು ಕೊನೆಯ ಹಂತದಲ್ಲಿ ಸೋಲೊಪ್ಪಿಕೊಂಡರು. ಪಿವಿ ಸಿಂಧು ಮಾಡಿದ ತಪ್ಪುಗಳ ಗರಿಷ್ಠ ಲಾಭವನ್ನು ಪಡೆದ ಎದುರಾಳಿ ಬಿವೆನ್ ಜಾಂಗ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೈಟಲ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ರನ್ನರ್ ಅಪ್ ಪಿವಿ ಸಿಂಧು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 
SCROLL FOR NEXT