ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದನ ದಾಳಿ ಖಂಡನೀಯ ಎಂದು ಒಲಿಂಪಿಕ್ ಪದಕ ವಿಜೇತ ಭಾರತ ಕುಸ್ತಿ ಪಟು ಸುಶೀಲ್ ಕುಮಾರ್ ಹೇಳಿದ್ದಾರೆ.
ಇಂತಹ ಭಯೋತ್ಪಾದಕ ದಾಳಿಗಳನ್ನು ಖಂಡಿಸಿ ಭಾರತೀಯ ಯೋಧರಿಗೆ ನೈತಿಕ ಬಲ ತುಂಬಬೇಕು ಎಂದು ಇಡೀ ದೇಶವನ್ನು ಸುಶೀಲ್ ಒತ್ತಾಯಿಸಿದ್ದಾರೆ.
ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾರತೀಯ ಯೋಧರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದು ಈ ದಾಳಿಯನ್ನು ದೇಶದ ಪ್ರತಿಯೊಬ್ಬ ಪ್ರಜೆ ಖಂಡಿಸಬೇಕು ಎಂದರು.
ದೇಶ ಕಾಯುತ್ತಿರುವ ಯೋಧರು ನಿಜಕ್ಕೂ ನಮ್ಮ ಪಾಲಿನ ದೇವರು ಇದ್ದ ಹಾಗೇ. ಅವರು ತಂದೆ-ತಾಯಿ, ಹೆಂಡತಿ, ಎಲ್ಲರನ್ನು ಬಿಟ್ಟು ದೇಶ ಕಾಯುವ ಕೆಲಸ ಮಾಡುತ್ತಾರೆ ಅವರಿಗೆ ನಾವು ಸದಾ ಋಣಿಯಾಗಿರಬೇಕು ಎಂದು ಸುಶೀಲ್ ಕುಮಾರ್ ಹೇಳಿದ್ದಾರೆ.