ಭಾರತೀಯ ಮಹಿಳಾ ಅಥ್ಲೀಟ್ಸ್ 
ಕ್ರೀಡೆ

ಸೀರೆಗೆ ಭಾರತೀಯ ಅಥ್ಲೀಟ್ಸ್ ಗುಡ್ ಬೈ..! ಪ್ಯಾಂಟ್ ಧರಿಸಲಿರುವ ಮಹಿಳಾ ಅಥ್ಲೀಟ್ಸ್!

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಆರಂಭಗೊಳ್ಳಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರೀಡಾಪುಟಗಳು ಪ್ಯಾಂಟ್ ಮತ್ತು ಬ್ಲೇಜರ್ ತೊಟ್ಟು...

ನವದೆಹಲಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಆರಂಭಗೊಳ್ಳಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರೀಡಾಪುಟಗಳು ಪ್ಯಾಂಟ್ ಮತ್ತು ಬ್ಲೇಜರ್ ತೊಟ್ಟು ಪಥಸಂಚಲನದಲ್ಲಿ ಭಾಗವಹಿಸುವ ಮೂಲಕ ಹಳೆಯ ಸಂಪ್ರದಾಯವನ್ನು ಮುರಿಯಲಿದ್ದಾರೆ.
ಏಪ್ರಿಲ್ 4ರಿಂದ ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ್ ನಲ್ಲಿ ಆರಂಭಗೊಳ್ಳಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಅಥ್ಲೀಟ್ಸ್ ಗಳು ಸೀರೆ ಬದಲಿಗೆ ಪ್ಯಾಂಟ್ ಹಾಗೂ ಬ್ಲೇಜರ್ ಧರಿಸಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ತಿಳಿಸಿದೆ. 
ಭಾರತದ ಪುರುಷ ಹಾಗೂ ಮಹಿಳಾ ಅಥ್ಲೀಟ್ ಗಳು ನೌಕಾ ನೀಲಿ(ನೇವಿ ಬ್ಲೂ) ಬಣ್ಣದ ಪ್ಯಾಂಟ್ ಹಾಗೂ ಬ್ಲೇಜರ್ ಗಳನ್ನು ಧರಿಸಲಿದ್ದಾರೆ ಎಂದು ಐಒಎ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಐಒಎ ಕಾರ್ಯದರ್ಶಿ ರಾಜೀವ್ ಮೆಹ್ದಾ ಅಥ್ಲೀಟ್ ಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಉದ್ಘಾಟನಾ ಸಮಾರಂಭ 4-5 ಗಂಟೆಗಳ ಕಾಲ ನಡೆಯಲಿದ್ದು ಅಷ್ಟು ಹೊತ್ತು ಸೀರೆಯುಟ್ಟುಕೊಂಡಿರುವುದು ಕಷ್ಟ ಎಂದು ಅಥ್ಲೀಟ್ ಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ