ಕ್ರೀಡೆ

ಜಿಮ್ನಾಸ್ಟಿಕ್ ವಿಶ್ವಕಪ್: ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಅರುಣಾ ರೆಡ್ಡಿ

Vishwanath S
ನವದೆಹಲಿ: ಜಿಮ್ನಾಸ್ಟಿಕ್ ವಿಶ್ವಕಪ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಅರುಣಾ ರೆಡ್ಡಿ ಇತಿಹಾಸ ನಿರ್ಮಿಸಿದ್ದಾರೆ. 
22 ವರ್ಷದ ಅರುಣಾ ರೆಡ್ಡಿ ಅವರು ಜಿಮ್ನಾಸ್ಟಿಕ್ ವಿಶ್ವಕಪ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇನ್ನು ಸ್ಲೋವಾನಿಯಾದ ಆಟಗಾರ್ತಿ ಟಿಜಾಸಾ ಕಿಸ್ಲೆಫ್ ಚಿನ್ನದ ಪದಕ ಗೆದ್ದರೇ ಆಸ್ಟ್ರೇಲಿಯಾದ ಎಮಿಲಿ ವೈಟ್ಹೆಡ್ ಬೆಳ್ಳಿ ಪದಕ ಗೆದ್ದಿದ್ದಾರೆ. 
ಅರುಣಾ ರೆಡ್ಡಿ ಅವರು ಕರಾಟೆಯಲ್ಲಿ ಬ್ಲಾಕ್ ಬೇಲ್ಟ್ ಪಡೆದಿದ್ದು ಕರಾಟೆ ಟ್ರೈನರ್ ಸಹ ಆಗಿದ್ದಾರೆ. 2005ರಲ್ಲಿ ಮೊದಲ ರಾಷ್ಟ್ರೀಯ ಪದಕ ಗೆದ್ದದ್ದರು. 2014ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಅರ್ಹತಾ ಸುತ್ತಿನಲ್ಲಿ 14ನೇ ಸ್ಥಾನ ಮತ್ತು ಏಷಿಯನ್ ಗೇಮ್ಸ್ ನಲ್ಲಿ 9ನೇ ಸ್ಥಾನ ಪಡೆದಿದ್ದರು. 
ಆಶೀಶ್ ಕುಮಾರ್ 2010ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಪದಕ ಗೆದ್ದ ಮೊದಲ ಪುರುಷ ಜಿಮ್ನಾಸ್ಟಿಕ್ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಇನ್ನು 52 ವರ್ಷಗಳ ಬಳಿಕ 2016ರ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದ ದೀಪಾ ಕುರ್ಮಾಕರ್ ಅವರು ಕೆಲವೇ ಅಂಕಗಳಿಂದ ಕಂಚಿನ ಪದಕ ವಂಚಿತರಾಗಿದ್ದರು. 
SCROLL FOR NEXT