ಇನ್ವಿಟೇಷನಲ್ ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ 6-0 ಅಂತರದ ಜಯ 
ಕ್ರೀಡೆ

ಇನ್ವಿಟೇಷನಲ್ ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ 6-0 ಅಂತರದ ಜಯ

ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ಇನ್ವಿಟೇಷನಲ್ ಹಾಕಿ ಪಂದ್ಯಾವಳಿಯಲ್ಲಿ ಜಪಾನ್ ವಿರುದ್ಧ ಭಾರತ 6-0 ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ತೌರಂಗ (ನ್ಯೂಜಿಲೆಂಡ್): ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ಇನ್ವಿಟೇಷನಲ್ ಹಾಕಿ ಪಂದ್ಯಾವಳಿಯಲ್ಲಿ ಜಪಾನ್ ವಿರುದ್ಧ ಭಾರತ  6-0 ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಪಂದ್ಯದ ಮೊದಲರ್ಧದಲ್ಲಿಯೇ ಭಾರತ 3-0  ಅಂತರದ ಮುನ್ನಡೆ ಸಾಧಿಸಿದ್ದು ರುಪಿಂದರ್ ಪಾಲ್ ಸಿಂಗ್ ಮತ್ತು ವಿವೇಕ್ ಸಾಗರ್ ತಲಾ ಎರಡು ಗೋಲು ಗಳಿಸಿದ್ದರು. ಇನ್ನು  ದಿಲ್‌ಪ್ರೀತ್ ಸಿಂಗ್ ಹಾಗೂ ಹರ್ಮನ್‌ಪ್ರೀತ್ ಸಿಂಗ್ ಒಂದೊಂದು ಗೋಲು ದಾಖಲಿಸಿದ್ದರು.
ಇದರಲ್ಲಿ ವಿವೇಕ್ ಸಾಗರ್ ಪ್ರಸಾದ್ ಮತ್ತು ದಿಲ್‌ಪ್ರೀತ್ ಸಿಂಗ್ ಗೆ ಇದು ಚೊಚ್ಚಲ ಪಂದ್ಯವಾಗಿದೆ ಎನ್ನುವುದು ವಿಶೇಷ. 
ಭಾರತ, ಜಪಾನ್, ಬೆಲ್ಜಿಯಂ ಮತ್ತು ನ್ಯೂಜಿಲೆಂಡ್ ರಾಷ್ಟ್ರಗಳು ಭಾಗವಹಿಸುತ್ತಿರುವ ಈ ಪಂದ್ಯಾವಳಿ ನ್ಯೂಜಿಲೆಂಡ್ನಲ್ಲಿ ಆಯೋಜನೆಗೊಂಡಿದೆ.  ಭಾರತೀಯ ಹಾಕಿ ತಂಡವನ್ನು ಹುರಿದುಂಬಿಸಲು ನ್ಯೂಜಿಲೆಂಡ್‌ನಲ್ಲಿ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ಕೋಚ್ ರಾಹುಲ್ ದ್ರಾವಿಡ್ ಅವರ ತಂಡದೊಡನೆ ಆಗಮಿಸಿದ್ದು ವಿಶೇಷವಾಗಿತ್ತು..

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ