ಮೆಲ್ಬೋರ್ನ್: ಭಾರತ್ದ ಅಗ್ರ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಆಶ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ನ ಕ್ವಾರ್ಟರ್ ಫೈನಲ್ಸ್ ಸುತ್ತು ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಹಂಗೇರಿಯ ಟಿಮಿಯಾ ಬಬೂಸ್ ಜತೆಯಾಗಿ ಅಮೆರಿಕಾದ ವ್ಯಾನಿಯಾ ಕಿಂಗ್ ಮತ್ತು ಕ್ರೋವೆಶಿಯಾದ ಫ್ರಾಂಕೊ ಸುಗೊರ್ ಅವರನ್ನು 6-4, 6-4 ನೇರ ಸೆಟ್ ಗಳಿಂದ ಮಣಿಸಿ ಈ ಸಾಧನೆ ಮಾಡಿದ್ದಾರೆ.
ಇನ್ನು ಅಂತಿಮ ಎಂಟರ ಸುತ್ತಿನಲ್ಲಿ ಬೋಪಣ್ಣ ಜೋಡಿ ಕೊಲಂಬಿಯಾದ ಸೆಬಾಸ್ಟಿಯನ್ ಕ್ಯಾಬಲ್ ಮತ್ತು ಅಮೆರಿಕದ ಅಬಿಗೈಲ್ ಅವರನ್ನು ಎದುರಿಸಬೇಕಿದೆ.
ಈ ನಡುವೆ ಪುರುಷರ ಡಬಲ್ಸ್ ಪಂದ್ಯಾವಳಿಯಲ್ಲಿ ಭಾರತದ ಲಿಯಾಂಡರ್ ಪೇಸ್, , ದಿವಿಜ್ ಶರಣ್, ಪೂರವ್ ರಾಜಾ ಹಾಗೂ ಬೋಪಣ್ಣ ಪರಾಭವ ಹೊಂದಿದ್ದಾರೆ.