ಇನ್ವಿಟೇಷನಲ್ ಹಾಕಿ: ಬೆಲ್ಜಿಯಂ ವಿರುದ್ಧ ಭಾರತಕ್ಕೆ 5-4 ಅಂತರದ ಭರ್ಜರಿ ಜಯ
ಹ್ಯಾಮಿಲ್ಟನ್: ನ್ಯೂಜಿಲೆಂಡ್ ನಲ್ಲಿ ನಡೆದಿರುವ ನಾಲ್ಕು ರಾಷ್ಟ್ರಗಳ ಇನ್ವಿತೇಷನಲ್ ಹಾಕಿ ಪಂದ್ಯಾವಳಿಯ ಎರಡನೇ ಲೀಗ್ ನಲ್ಲಿ ವಿಶ್ವ ನಂ.3 ಬೆಲ್ಜಿಯಂ ವಿರುದ್ಧ ಭಾರತ ಅಭೂತಪೂರ್ವ ಜಯ ದಾಖಲಿಸಿದೆ.
ಪ್ರಬಲ ಎದುರಾಳಿಯಾಗಿದ್ದ ಬೆಲ್ಜಿಯಂ ವಿರುದ್ಧ ಭಾರತ 5-4 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ.
ಭಾರತದ ಪರವಾಗಿ ರುಪಿಂದರ್ ಪಾಲ್ ಸಿಂಗ್(4', 42'), ದಿಲ್ಪ್ರೀತ್ ಸಿಂಗ್(59'), ಲಲಿತ್ ಉಪಾಧ್ಯಾಯ್(53') ಹಾಗೂ ಹರ್ಮನ್ಪ್ರೀತ್ ಸಿಂಗ್(46') ತಮ್ಮ ಶ್ರೇಷ್ಠ ಪ್ರದರ್ಶನದಲ್ಲಿ ಗೋಲುಗಳನ್ನು ದಾಖಲಿಸಿ ತಂಡದ ಜಯಕ್ಕೆ ಕಾರಣರಾದರು.
ಈ ಹಿಂದೆ ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದ್ದ ಭಾರತ ತಂಡ ಈ ಬಾರಿ ಅಮೋಘ ಪ್ರದರ್ಶನ ನೀಡಿದೆ. ಎರಡನೇ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಭಾರತ ಅತಿಥೇಯ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಿದ್ದು ಇದೀಗ ಬೆಲ್ಜಿಯಂ ವಿರುದ್ಧವೂ ಜಯಿಸುವ ಮೂಲಕ ಯಶಸ್ಸಿನ ಹಾದಿಗೆ ಮರಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics