ರೋಹನ್ ಬೋಪಣ್ಣ ಮತ್ತು ಟಿಮಿಯಾ ಬಬೂಸ್ ಜೋಡಿ (ಸಂಗ್ರಹ ಚಿತ್ರ) 
ಕ್ರೀಡೆ

ಆಸ್ಟ್ರೇಲಿಯಾ ಓಪನ್ ಫೈನಲ್: ರೋಹನ್ ಬೋಪಣ್ಣ, ಟಿಮಿಯಾ ಬಬೋಸ್ ಜೋಡಿಗೆ ಸೋಲು

ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ಮತ್ತು ಹಗೇರಿಯಾದ ಟಿಮಿಯಾ ಬಬೂಸ್ ಜೋಡಿ ಭಾನುವಾರ ನಡೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್ ನಲ್ಲಿ ಸೋಲು ಅನುಭವಿಸಿದೆ.

ಸಿಡ್ನಿ: ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ಮತ್ತು ಹಗೇರಿಯಾದ ಟಿಮಿಯಾ ಬಬೂಸ್ ಜೋಡಿ ಭಾನುವಾರ ನಡೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್ ನಲ್ಲಿ ಸೋಲು ಅನುಭವಿಸಿದೆ.
ಭಾನುವಾರ ನಡೆದ ಮಿಶ್ರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಗಾಬ್ರಿಯೆಲಾ ಡಬ್ರೊಸ್ಕಿ ಮತ್ತು ಮೇಟ್ ಪವಿಕ್ ವಿರುದ್ಧ ರೋಹನ್ ಬೋಪಣ್ಣ ಮತ್ತು ಟಿಮಿಯಾ ಬಬೂಸ್ ಜೋಡಿ 6-2, 4-6, [9-11] ಅಂತರದಲ್ಲಿ ಸೋಲು ಕಂಡಿದೆ.  ಆರಂಭದಿಂದಲೂ ರೋಚಕವಾಗಿ ಸಾಗಿದ್ದ ಪಂದ್ಯದ ಅಂತಿಮ ಭಾಗದಲ್ಲಿ ಮೇಲುಗೈ ಸಾಧಿಸಿದ ಗಾಬ್ರಿಯೆಲಾ ಡಬ್ರೊಸ್ಕಿ ಮತ್ತು ಮೇಟ್ ಪವಿಕ್ ಜೋಡಿ ಗೆಲುವು ಕಾಣುವ ಮೂಲಕ ಪ್ರಶಸ್ತಿಗೆ ಮುತ್ತಿಟ್ಟಿತು. 
ಇನ್ನು ಕಳೆದ ಶುಕ್ರವಾರ  ನಡೆದ ಮಿಶ್ರ ಡಬಲ್ಸ್ ಸೆಮಿಫೈನಲ್ ಮುಖಾಮುಖಿಯಲ್ಲಿ ಟಿಮಿಯಾ ಬಬೂಸ್ ಜತೆ ಕಣಕ್ಕಿಳಿದ ಬೋಪಣ್ಣ, ಎದುರಾಳಿ ಸ್ಪೇನ್-ಬ್ರೆಜಿಲ್‌ನ ಮಾರ್ಸೆಲೊ ಡೆಮೊಲಿನರ್ ಹಾಗೂ ಮಾರ್ಟಿನೆಜ್ ಸ್ಯಾನ್‌ಚೆಜ್  ವಿರುದ್ಧ 7-5, 5-7, 10-6ರ ಕಠಿಣ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಟೂರ್ನಿಯುದ್ಧಕ್ಕೂ ಅಮೋಘ ನಿರ್ವಹಣೆ ನೀಡಿರುವ ಐದನೇ ಶ್ರೇಯಾಂಕಿತರಾಗಿರುವ ಬೋಪಣ್ಣ ಜೋಡಿ ಫೈನಲ್ ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ  ಜೋಡಿಯಾಗಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!