ರಾಮ್ ಕುಮಾರ್ ರಾಮನಾಥನ್ 
ಕ್ರೀಡೆ

ಹಾಲ್ ಆಫ್ ಫೇಮ್ ಓಪನ್: ಟಿಮ್ ಸ್ಮಿಕ್ಜೆಕ್ ಸೋಲಿಸಿದ ರಾಮ್ ಕುಮಾರ್ ಫೈನಲ್ ಪ್ರವೇಶ

ಅಮೆರಿಕಾದ ನ್ಯೂಪೊರ್ಟ್ ನಲ್ಲಿ ನಡೆದ ಹಾಲ್ ಆಫ್ ಫೇಮ್ ಓಪನ್ ಟೂರ್ನಮೆಂಟ್ ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕಾದ ಟಿಮ್ ಸ್ಮಿಕ್ಜೆಕ್ ಅವರನ್ನು 6-4, 7-5 ಅಂತರದಿಂದ ಮಣಿಸಿದ ಭಾರತದ ಟೆನ್ನಿಸ್ ಆಟಗಾರ ರಾಮ್ ಕುಮಾರ್ ರಾಮನಾಥನ್ ಫೈನಲ್ ಪ್ರವೇಶಿಸಿದ್ದಾರೆ.

ಅಮೆರಿಕಾ: ನ್ಯೂಪೊರ್ಟ್ ನಲ್ಲಿ ನಿನ್ನೆ ನಡೆದ ಹಾಲ್ ಆಫ್ ಫೇಮ್ ಓಪನ್ ಟೂರ್ನಮೆಂಟ್ ನಲ್ಲಿ  ಭಾರತದ ಟೆನ್ನಿಸ್ ಆಟಗಾರ ರಾಮ್ ಕುಮಾರ್ ರಾಮನಾಥನ್ ಫೈನಲ್  ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್  ಸೆಮಿಫೈನಲ್ ಪಂದ್ಯದಲ್ಲಿ  23 ವರ್ಷದ ರಾಮ್ ಕುಮಾರ್ ರಾಮನಾಥನ್ ಅಮೆರಿಕಾದ ಟಿಮ್ ಸ್ಮಿಕ್ಜೆಕ್ ಅವರನ್ನು  6-4, 7-5 ಅಂತರದಿಂದ ಮಣಿಸಿ  ಫೈನಲ್ ಪ್ರವೇಶಿಸಿದರು.
ಫೈನಲ್ ಪಂದ್ಯದಲ್ಲಿ ರಾಮ್ ಕುಮಾರ್   ಇಂದು ಸ್ಪೆನ್ ನ ಗ್ರಾನೊಲ್ಲರ್ಸ್ ಮತ್ತು ಅಮೆರಿಕಾದ ಸ್ಟಿವ್ ಜಾನ್ಸನ್ ನಡುವೆ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲುವ ಆಟಗಾರರ ವಿರುದ್ಧ  ಸೆಣಸಾಟ ನಡೆಸಲಿದ್ದಾರೆ.
2011 ರಲ್ಲಿ ಭಾರತದ ಸೋಮದೇವ್  ದೇವ್ ವರ್ಮಾ ದಕ್ಷಿಣ ಆಫ್ರಿಕಾದ ವೈಲ್ಡ್ ಕಾರ್ಡ್ ಐಜಾಕ್ ವ್ಯಾನ್ ಡೆರ್ ಮಾರ್ವೆ ಅವರನ್ನು ಸೋಲಿಸುವ ಮೂಲಕ  ಎಟಿಪಿ ವರ್ಲ್ಡ್  ಟೂರ್ನಮೆಂಟ್ ನಲ್ಲಿ ಫೈನಲ್ ಪ್ರವೇಶಿಸಿದ್ದರು.  ಫೈನಲ್ ಪಂದ್ಯದಲ್ಲಿ ಕೆವಿನ್ ಆಂಡರ್ಸನ್ ವಿರುದ್ಧ  ಸೋಮದೇವ್ ಸೋಲಿಗೆ ಶರಣಾಗಿದ್ದರು.

ನ್ಯೂ ಪೊರ್ಟ್ ಟೂರ್ನಮೆಂಟ್ ಭಾರತೀಯ ಆಟಗಾರರಿಗೆ  ನೆಚ್ಚಿನ  ಮೈದಾನವಾಗಿದೆ.  ಈ ಹಿಂದೆ ಭಾರತೀಯ ಲೆಜೆಂಡ್ ವಿಜಯ್ ಅರ್ಮಿತ್ ರಾಜ್ 1976, 1980, 1984 ರಲ್ಲಿ ಹಾಲ್ ಆಫ್ ಫೇಮ್ ಒಪನ್ ಸಿಂಗಲ್ಸ್ ಸುತ್ತಿನಲ್ಲಿ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ.
ವಿಜಯ್ ಅರ್ಮಿತ್ ರಾಜ್  ಅವರ ಪುತ್ರ ಪ್ರಕಾಶ್ ಅರ್ಮಿತ್ ರಾಜ್ 2008ರಲ್ಲಿ ನಡೆದ ಹಾಲ್ ಆಫ್ ಓಪನ್ ಟೂರ್ನಮೆಂಟ್ ನಲ್ಲಿ  ಫೈನಲ್ ಪ್ರವೇಶಿಸಿದ್ದರು.
 ಒಂದು ವೇಳೆ ರಾಮ್ ಕುಮಾರ್  ಟೂರ್ನಮೆಂಟ್ ನಲ್ಲಿ  ಗೆದ್ದರೆ  ಲಿಯಾಂಡರ್  ಪೇಸ್  1998ರಲ್ಲಿ ಜಯಿಸಿದ 20 ವರ್ಷದ ನಂತರ ಭಾರತದ ಮೊದಲ ಭಾರತೀಯ ಆಟಗಾರನೊಬ್ಬ ಪ್ರಶಸ್ತಿ  ಗೆದ್ದಂತಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT