ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬ್ಯಾಡ್ಮಿಂಟನ್: ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಲಕ್ಷಯ ಸೇನ್ ಗೆ ಚಿನ್ನ

ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷಯ ಸೇನ್ ಚಿನ್ನದ ಪದಕ ಜಯಿಸಿದ್ದಾರೆ.

ಲಕ್ಷಯ ಸೇನ್
Raghavendra Adiga
Updated On : 22 Jul 2018, 3:57 am
ಜಕಾರ್ತಾ: ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷಯ ಸೇನ್ ಚಿನ್ನದ ಪದಕ ಜಯಿಸಿದ್ದಾರೆ.
ಇಂಡೋನೇಷಿಯಾದ ಅಗ್ರ ಶ್ರೇಯಾಂಕಿತ ಆಟಗಾರ ಕುನ್ಲವುತ್ ವಿಟಿದಾರನ್ ಅವರ ವಿರುದ್ಧ  21-19, 21-18 ಅಂತರದ ಗೆಲುವು ಸಾಧಿಸಿದ ಸೇನ್ ಆರು ವರ್ಷದ ಬಳಿಕ ದೇಶಕ್ಕೆ ಚೊನ್ನದ ಪದಕ ಗಳಿಸಿಕೊಟ್ಟಿದ್ದಾರೆ.
ಪ್ರಾರಂಭದಲ್ಲಿ ನಿಧಾನಗತಿಯಲ್ಲಿ ಆಟವಾಡಿದರೂ ಮುಂದೆ ಎದುರಾಳಿ ಮೇಲೆ ಉತ್ತಮ ಹಿಡಿತ ಸಾಧಿಸಿದ ಲಕ್ಷಯ ಸೇನ್ ಅಂತಿಮವಾಗಿ ವಿಜಯ ಮಾಲೆ ಧರಿಸುವಲ್ಲಿ ಸಫಲವಾದರು.

Advertisement

Advertisement

ಇದಕ್ಕೂ ಮುನ್ನ ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಪದಕಗಳನ್ನು ಗೆದ್ದ ಭಾರತಿಯ ಆಟಗಾರರ ಪಟ್ಟಿ ಹೀಗಿದೆ-
  • ಗೌತಮ್ ಠಾಕೂರ್ - ಚಿನ್ನ- 1965
  • ಪ್ರಣವ್ ಚೋಪ್ರಾ/ ಪ್ರಜ್ಕ್ತಾ ಸಾವಂತ್ - ಕಂಚು - 2009
  • ಸಮೀರ್ ವರ್ಮಾ -ಬೆಳ್ಳಿ - 2011
  • ಪಿವಿ ಸಿಂಧೂ - ಕಂಚು - 2011
  • ಪಿವಿ ಸಿಂಧೂ - ಚಿನ್ನ - 2012 
  • ಸಮೀರ್ ವರ್ಮಾ - ಕಂಚು - 2012

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement