ಸಾಂದರ್ಭಿಕ ಚಿತ್ರ 
ಕ್ರೀಡೆ

ಸ್ಪೇನ್ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ 4-1 ಜಯ, ಸರಣಿ ಸಮ

ನಾಯಕಿ ರಾಣಿ ರಾಂಪಾಲ್ ಹಾಗೂ ಡಿಪೆಂಡರ್ ಗುರ್ಜಿತ್ ಕೌರ್ ಅವರ ಅಮೋಘ ಆಟದ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡ ಸ್ಪೇನ್ ತಂಡವನ್ನು 4-1 ಅಂತರಿಂದ ಮಣಿಸಿದ್ದು, ಸರಣಿ 2-2 ಅಂತರದಿಂದ ಸಮವಾಗಿದೆ.

ಮ್ಯಾಡ್ರೀಡ್ : ನಾಯಕಿ ರಾಣಿ ರಾಂಪಾಲ್ ಹಾಗೂ ಡಿಪೆಂಡರ್ ಗುರ್ಜಿತ್ ಕೌರ್ ಅವರ ಅಮೋಘ ಆಟದ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡ   ಸ್ಪೇನ್ ತಂಡವನ್ನು 4-1 ಅಂತರಿಂದ ಮಣಿಸಿದ್ದು, ಸರಣಿ  2-2 ಅಂತರದಿಂದ ಸಮವಾಗಿದೆ.

ಕಾಂಸೆಜೊ ಸುಪಿರಿಯರ್ ಡಿ ಡಿಪೋರ್ಟ್ಸ್  ಹಾಕಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ 33 ಹಾಗೂ 37ನೇ ನಿಮಿಷದಲ್ಲಿ ರಾಣಿ ಗಳಿಸಿದ ಎರಡು ಗೋಲುಗಳಿಂದ ಪಂದ್ಯದ ಮೇಲೆ ಭಾರತ ಪ್ರಾಬಲ್ಯ ಸಾಧಿಸಿತ್ತು.  

ನಂತರ 44 ಹಾಗೂ 50  ನೇ ನಿಮಿಷದಲ್ಲಿ ಗುರ್ಜಿತ್ ಕೌರ್  ಎರಡು ಗೋಲು ಗಳಿಸುವ ಮೂಲಕ ಪಂದ್ಯವನ್ನು  ಜಯದ ಹಾದಿಯತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.
 ಆದಾಗ್ಯೂ, 58 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ  ಸ್ಪೇನ್ ನ ಲಾರಾ ರಿಯಾರಾ ಗೋಲು ಗಳಿಸುವ ಮೂಲಕ ಭಾರತಕ್ಕೆ ಸವಾಲು ನೀಡಲು ಪ್ರಯತ್ನಿಸಿತ್ತು. ಆದರೆ, ಪಂದ್ಯ 4-1 ಅಂತರದಿಂದ ಅಂತ್ಯಗೊಂಡಿತ್ತು. ಭಾರತ  2-2 ಅಂತರದಿಂದ ಸರಣಿ ಜಯ ಸಾಧಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel