ಚಾಂಪಿಯನ್ಸ್ ಟ್ರೋಫಿ: 4-0 ಅಂತರಿಂದ ಪಾಕಿಸ್ತಾನವನ್ನು ಮಣಿಸಿದ ಭಾರತ ಹಾಕಿ ತಂಡ
ನೆದರ್ಲ್ಯಾಂಡ್ಸ್: ಎಫ್ಐಹೆಚ್ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತ ಹಾಕಿ ತಂಡ ಪಾಕಿಸ್ತಾನ ತಂಡವನ್ನು 4-0 ಗೋಲುಗಳ ಅಂತರದಿಂದ ಮಣಿಸಿ ಶುಭಾರಂಭ ಮಾಡಿದೆ.
ನೆದರ್ಲ್ಯಾಂಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಹಾಫ್ ಟೈಮ್ ಬ್ರೇಕ್ ನ ವೇಳೆಗೆ 1-0 ಅಂತರದಿಂದ ಪಾಕ್ ವಿರುದ್ಧ ಮೇಲುಗೈ ಸಾಧಿಸಿತ್ತು, ನಂತರ ಫೈನಲ್ ಕ್ವಾರ್ಟರ್ ನಲ್ಲಿ ಮೂರು ಗೋಲುಗಳನ್ನು ದಾಖಲಿಸಿ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.
ಭಾರತದ ಪರ ರಮಣ್ ದೀಪ್ ಸಿಂಗ್, ದಿಲ್ಪ್ರೀತ್ ಸಿಂಗ್, ಮನ್ದೀಪ್ ಸಿಂಗ್ ಹಾಗೂ ಲಲಿತ್ ಉಪಾಧ್ಯಾಯ ಗೋಲ್ ಗಳನ್ನು ದಾಖಲಿಸಿದ್ದಾರೆ. 25 ನೇ ನಿಮಿಷದಲ್ಲಿ ರಮಣ್ ದೀಪ್ ಭಾರತದ ಪರ 1-0 ಗೋಲುಗಳನ್ನು ದಾಖಲಿಸಿದರು. ಆದರೆ ಮೂರನೇ ಕ್ವಾರ್ಟರ್ ವರೆಗೂ ಭಾರತ ಮತ್ತೊಂದು ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ, 54 ನೇ ನಿಮಿಷದಲ್ಲಿ ದಿಲ್ಪ್ರೀತ್ ಸಿಂಗ್ ದಾಖಲಿಸಿದ ಗೋಲ್ ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿತು.
57ನೇ ನಿಮಿಷದಲ್ಲಿ ಮನ್ದೀಪ್ ಗಳಿಸಿದ ಗೋಲ್ ಹಾಗೂ ಅಂತಿಮವಾಗಿ ಲಲಿತ್ ದಾಖಲಿಸಿದ ಗೋಲ್ ಭಾರತ ಪಾಕ್ ವಿರುದ್ಧ 4-0 ಅಂತರದಿಂದ ಗೆಲ್ಲಲು ನೆರವಾಯಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos