ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತ-ಬೆಲ್ಜಿಯಂ ಪಂದ್ಯ ಡ್ರಾದಲ್ಲಿ ಅಂತ್ಯ
ಬ್ರೆಡಾ (ನೆದರ್ಲ್ಯಾಂಡ್): ನೆದರ್ಲ್ಯಾಂಡ್ ನಲ್ಲಿ ನಡೆಯುತ್ತಿರುವ ಎಫ್ಐಹೆಚ್ ಚಾಂಪಿಯನ್ಸ್ ಟ್ರೋಫಿ ಗುರುವಾರದ ಪಂದ್ಯದಲ್ಲಿ ಭಾರತ ಬೆಲ್ಜಿಯಂ ಪಂದ್ಯ ಡ್ರಾದೊಂದಿಗೆ ಮುಕ್ತಾಯ ಕಂಡಿದೆ.
ನಾಲ್ಕನೇ ಲೀಗ್ ಪಂದ್ಯದಲ್ಲಿ ಭಾರತ ಬೆಲ್ಜಿಯಂ ತಂಡಗಳು ತಲಾ ಒಂದೊಂದು ಗೋಲು ಗಳಿಸಿಕೊಂಡು ಪಂದ್ಯ ಡ್ರಾ ಮಾಡಿಕೊಂಡಿದೆ.
ಪಂದ್ಯದ ಹತ್ತನೇ ನಿಮಿಷದಲ್ಲಿ ಭಾರತದ ಹರ್ಮನ್ ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 1-0 ಮುನ್ನಡೆ ದೊರಕಿಸಿದ್ದರು. ಆದರೆ ಪಂದ್ಯದ 59ನೇ ನಿಮಿಷದಲ್ಲಿ ಬೆಲ್ಜಿಯಂನ ಲಾಕ್ ಲುಪಾರ್ಟ್ ಗೋಲು ಗಳಿಸಿಕೊಳ್ಳುವುದರೊಡನೆ ಎರಡು ತಂಡಗಳು ಸಮಬಲ ಹೊಂದುವಂತಾಗಿತ್ತು.
ಶನಿವಾರ ಭಾರತ ತನ್ನ ಕಡೆಯ ಲೀಗ್ ಪಂದ್ಯವನ್ನಾಡಲಿದ್ದು ಹಾಲೆಂಡ್ ತಂಡವನ್ನು ಎದುರಿಸಲಿದೆ.
ಇದಾಗಲೇ 2 ಜಯ, 1 ಡ್ರಾ, ಮತ್ತು 1 ಸೋಲು ಕಂಡಿರುವ ಭಾರತ ತಂಡ ಭಾನುವಾರದ ಫೈನಲ್ಸ್ ಪ್ರವೇಶಿಸುವ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics