ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್: ವಿನೇಶ್ ಪೋಗಟ್ ಗೆ ಬೆಳ್ಳಿ, ಸಂಗೀತಾಗೆ ಕಂಚು (ಚಿತ್ರ ಕೃಪೆ- ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಲೈವ್ ಸ್ಟ್ರೀಮಿಂಗ್) 
ಕ್ರೀಡೆ

ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್: ವಿನೇಶ್ ಪೋಗಟ್ ಗೆ ಬೆಳ್ಳಿ, ಸಂಗೀತಾಗೆ ಕಂಚು

ಕಿರ್ಗಿಸ್ಥಾನದ ಬಿಶ್ ಕೆಕ್ ನಲ್ಲಿ ನಡೆಯುತ್ತಿರುವ ಏಷ್ಯಾ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ವಿನೇಶ್ ಪೋಗಟ್ ಬೆಳ್ಳಿ ಪದಕ ಗಳಿಸಿದ್ದಾರೆ.

ಬೆಶ್ ಕೆಕ್(ಕಿರ್ಗಿಸ್ಥಾನ): ಕಿರ್ಗಿಸ್ಥಾನದ ಬಿಶ್ ಕೆಕ್ ನಲ್ಲಿ ನಡೆಯುತ್ತಿರುವ ಏಷ್ಯಾ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ವಿನೇಶ್ ಪೋಗಟ್ ಬೆಳ್ಳಿ ಪದಕ ಗಳಿಸಿದ್ದಾರೆ.
ಮಹಿಳೆಯರ 50 ಕೆಜಿ (ಫ್ರೀ ಸ್ಟೈಲ್) ವಿಭಾಗದಲ್ಲಿ ಪೋಗಟ್ ಚೀನಾದ ಚುನ್ ಲೀ ಅವರ ವಿರುದ್ಧ ನಡೆದ ಅಂತಿಮ ಸುತ್ತಿನ ಹೋರಾಟದಲ್ಲಿ 3-2ರ ಅಂತರದಲ್ಲಿ ಪರಾಭವಗೊಂಡರು.
ಪಂದ್ಯದ ಪ್ರಾರಂಭದಲ್ಲಿ 0-1 ಅಂತರದಲ್ಲಿ ಹಿನ್ನಡೆ ಆನುಭವಿಸಿದ್ದ ಪೋಗಟ್ ನಂತರ ಸುತ್ತುಗಳಲ್ಲಿ ಉತ್ತಮ ಸ್ಪರ್ಧೆ ಒಡ್ಡಿದ್ದರು.ಆದರೆ ಚೀನಾ ಕುಸ್ತಿಪಟು ಲೀ ತಾನು ಕಡೆಯವರೆಗೆ ಪ್ರಬಲ ಪೈಪೋಟಿ ನೀಡಿದ್ದಲ್ಲದೆ ಪಂದ್ಯ ಜಯಿಸುವಲ್ಲಿ ಯಶಸ್ವಿಯಾಗಿದ್ದರು.
2014ರ ಕಾಮನ್ ವೆಲ್ತ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿದ್ದ ಪೋಗಟ್ ಅವರು ಸೆಮಿ ಫೈನಲ್ಸ್ ಹಂತದಲ್ಲಿ ಜಪಾನ್ ನ ಯೂಕಿ ಇರಿ ಅವರನ್ನು ಮಣಿಸಿ ಫೈನಲ್ಸ್ ಪ್ರವೇಶಿಸಿದ್ದರು.
ಸಂಗೀತಾಗೆ ಕಂಚು
ಭಾರತದ ಇನ್ನೋರ್ವ ಕುಸ್ತಿ ಪಟು ಸಂಗೀತಾ 59 ಕೆಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ಸಂಗೀತಾ ಅವರು ಕ್ವಾರ್ಟರ್ ಫೈನಲ್ಸ್ ಹಂತದಲ್ಲಿ ಉಜ್ರೇಕಿ ಸ್ಥಾನದ ನಬಿರಾ ಎಸೆನ್ ಬಾಯಿವಾ ಅವರ ವಿರುದ್ಧ ಸೆಣೆಸಿದ್ದು 5-15 ಅಂತರದಿಂದ ಪರಾಭವಗೊಂಡಿದ್ದರು.
ಭಾರತದ ಪರವಾಗಿ ವಿನೇಶ್ ಹಾಗೂ ಸಂಗೀತಾ ಅವರುಗಳು ಇಂದು ಒಂದೊಂದು ಪದಕ ಗೆದ್ದಿದ್ದು ಕ್ರೀಡಾಕೂಟದಲ್ಲಿ ಭಾರತ ಇದುವರೆಗೆನಾಲ್ಕು ಪದಕಗಳ ಗೆದ್ದು ಸಾಧನೆ ಮಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel